ಚಿನ್ನದ ಮಾಸ್ಕ್​ನಲ್ಲಿ ಶ್ರುತಿ ಹಾಸನ್​ ಹೇಗೆ ಕಾಣಿಸುತ್ತಾರೆ ನೋಡಿ!!

SS
Published on

ಕರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್​ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾಧ್ಯವಾದರೆ ಮನೆಯಲ್ಲಿಯೇ ಇರಬೇಕು, ಜನಜಂಗುಳಿಯಿಂದ ದೂರವೇ ಉಳಿಯಬೇಕು. ಮಾಸ್ಕ್​ ಇದ್ದರಷ್ಟೇ ಮನೆಯಿಂದ ಹೊರಬರಬೇಕು. ಹೀಗೆ ಒಂದಷ್ಟು ನಿಯಮಗಳು ಇದೀಗ ಜಾರಿಯಲ್ಲಿವೆ.

ಹೀಗಿರುವಾಗಲೇ ಸಿನಿಮಾ ಮಂದಿಯೂ ಸೋಷಿಯಲ್​ ಮೀಡಿಯಾದಲ್ಲಿ ಮಾಸ್ಕ್​ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುವಂತೆಯೂ ಮನವಿ ಮಾಡುತ್ತಿದ್ದಾರೆ. ಇದೀಗ ಬಂಗಾರದ ಮಾಸ್ಕ್​ ಧರಿಸಿ ಶ್ರುತಿ ಹಾಸನ್​ ಸುದ್ದಿಯಲ್ಲಿದ್ದಾರೆ.

ಹೌದು, ಹಾಗಂತ ಬಂಗಾರದ ಮಾಸ್ಕ್​ ಮಾಡಿ ಧರಿಸಿಲ್ಲ. ಬದಲಿಗೆ, ಫಿಲಂಫೇರ್​ ಮ್ಯಾಗ್​ಜೀನ್​ಗೆ ವಿಭಿನ್ನ ಶೈಲಿಯ ಫೋಟೋಶೂಟ್​ ಮಾಡಿಸಿ ಸುದ್ದಿಯಲ್ಲಿದ್ದಾರೆ. ಬಂಗಾರದ ಸರಗಳಿಂದಲೇ ಜೋಡಿಸಿದ ಮಾಸ್ಕ್​ ಹೋಲುವ ಒಡೆವೆಯನ್ನು ತೊಟ್ಟಿದ್ದಾರೆ. ಸದ್ಯ ಶ್ರುತಿಯ ಅವರ ಈ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಮಾಸ್​ ಹೋಲುವ ಹೊಸ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ, ಬಾಲಿವುಡ್​ನ ಯಾರಾ ಸಿನಿಮಾದಲ್ಲಿ ಶ್ರುತಿ ಹಾಸನ್​ ನಟಿಸಿದ್ದು, ಜೀ5 ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಿದೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net