

ಸೌತ್ ಲೇಡಿ ಸೂಪರ್ಸ್ಟಾರ್ ನಯನತಾರಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಈಗಾಗಲೇ ಪ್ರಿಯಕರ ವಿಘ್ನೇಶ್ ಶಿವನ್ ಜತೆ ಮದುವೆ ಆಗಿದೆ ಎಂಬ ಸುದ್ದಿ ಒಂದೆಡೆ ಹರಿದಾಡಿದರೆ, ಇಬ್ಬರಿಗೂ ಕರೊನಾ ಬಂದು ಮನೆಯಲ್ಲಿಯೇ ಹೋಮ್ ಕ್ವಾರಂಟೈನ್ ಆಗಿದ್ದಾರೆ ಎಂಬುದು ಇತ್ತೀಚೆಗಷ್ಟೇ ಸದ್ದು ಮಾಡಿತ್ತು. ನಮ್ಮ ಮದುವೆನೂ ಆಗಿಲ್ಲ, ಕರೊನಾ ಸಹ ಬಂದಿಲ್ಲ ಎಂದು ಈ ಜೋಡಿ ಹೇಳಿಕೊಂಡಿತ್ತು. ಇದೀಗ ಇದೇ ಜೋಡಿ ಮತ್ತೆ ಜ್ಯೋತಿಷ್ಯದ ವಿಚಾರವಾಗಿ ಸುದ್ದಿಯಲ್ಲಿದೆ.
ಹೌದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಳೆದ ಹಲವು ವರ್ಷಗಳಿಂದ ಡೇಟಿಂಗ್ನಲ್ಲಿದ್ದಾರೆ. ಇನ್ನೇನು ಈ ಜೋಡಿ ಮದುವೆ ಆಗಲಿದೆ ಎಂಬ ಮಾತುಗಳು ಈ ಹಿಂದೆಯೇ ಕೇಳಿ ಬಂದಿವೆಯಾದರೂ, ಇಂದಿಗೂ ಅದು ನಿಜವಾಗಿಲ್ಲ. ಇದೀಗ ಈ ಜೊಡಿಯ ವಿವಾಹ ಮುಂದೂಡುತ್ತಲೇ ಇರುವುದಕ್ಕೆ ಒಂದು ಬಲವಾದ ಕಾರಣವಿದೆಯಂತೆ.
ಈಗಾಗಲೇ ಜ್ಯೊತಿಷಿಗಳು ಹೇಳಿದ ಹಾಗೆ ಸಾಕಷ್ಟು ದೇವಸ್ಥಾನಗಳಿಗೆ ಇವರಿಬ್ಬರು ಭೇಟಿ ನೀಡಿ ಬಂದಿದ್ದಾರೆ. ಆದರೆ, ಇಂದಿಗೂ ಆ ಒಂದು ದೇವಾಲಯಕ್ಕೆ ನಯನತಾರಾ ಮತ್ತು ವಿಘ್ನೇಶ್ ಹೋಗಿ ದರ್ಶನ ಪಡೆದು ಬಂದಿಲ್ಲವಂತೆ. ಆ ದೇವರ ದರ್ಶನದ ಬಳಿಕವಷ್ಟೇ ಈ ಜೋಡಿ ಬಾಳ ಬಂಧನಕ್ಕೆ ಕಾಲಿರಿಸಲಿದೆಯಂತೆ. ಹಾಗಾದರೆ ಯಾವುದಾ ದೇವಸ್ಥಾನ? ತಮಿಳುನಾಡಿನ ಕುಂಭಕೋಣಂನಲ್ಲಿರುವ ರಾಹು ದೇವಸ್ಥಾನ. ಹಾಗಾದರೆ, ಈ ಜೋಡಿಯ ಜಾತಕದಲ್ಲಿ ರಾಹು ದೋಷವಿದೆ ಹಾಗಾಗಿ ಆ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುವಂತೆ ಆದೇಶಿಸಿದ್ದಾರೆ.
ಇದನ್ನೂ ಓದಿ: ಆರ್ಜಿವಿ ಮಿಸ್ಸಿಂಗ್ … ಇದೇನಿದು ಹೊಸ ಕಥೆ?
ಸದ್ಯಕ್ಕೆಕರೊನಾ ಹಿನ್ನೆಲೆಯಲ್ಲಿ ಇನ್ನು ಕೆಲ ದಿನಗಳ ಬಳಿಕ ಈ ಜೋಡಿ ಕುಂಬಕೋಣಂನತ್ತ ಪಯಣಿಸಲಿದೆ. ಅಂದಹಾಗೆ, ಕಳೆದ ಹತ್ತಾರು ವರ್ಷಗಳಿಂದ ಜ್ಯೋತಿಷಿಗಳ ಮಾತನ್ನು ಚಾಚೂತಪ್ಪದೆ ನಯನತಾರಾ ಪಾಲಿಸುತ್ತ ಬಂದಿದ್ದಾರೆ. (ಏಜೆನ್ಸೀಸ್)