ಇನ್ನು, ನಟಿ ಶ್ರುತಿ ಹಾಸನ್ ಇಂದು (ಜನವರಿ 28) ತಮ್ಮ 36ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹಲವು ಸಿನಿತಾರೆಯರು ಶ್ರುತಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭವಾಗಿ, ನಿರ್ಮಾಪಕರು ‘ಸಲಾರ್’ ಚಿತ್ರದಲ್ಲಿನ ನಟಿಯ ಮೊದಲ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ನಟಿ ಶ್ರುತಿ ಈ ಸಿನಿಮಾದಲ್ಲಿ 'ಆದ್ಯ' ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.