ತೆಲುಗಿಗೆ ಶ್ರೀಲೀಲಾ; 'ಪೆಳ್ಳಿ ಸಂದದಿ' ಸಿನಿಮಾಗೆ ನಾಯಕಿ

Shreeleela
Published on

ಬೆಂಗಳೂರು: ‘ಕಿಸ್’ ಸಿನಿಮಾ ಮೂಲಕ ಚಂದನವನಕ್ಕೆ ಬಂದು ‘ಭರಾಟೆ’ ಮೂಲಕ ಸದ್ದು ಮಾಡಿದ್ದ ನಟಿ ಶ್ರೀಲೀಲಾ, ಇದೀಗ ಕನ್ನಡದಲ್ಲಿ ‘ದುಬಾರಿ’ ಮತ್ತು ‘ಬೈಟುಲವ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಪಕ್ಕದ ಟಾಲಿವುಡ್​ಗೂ ಪ್ರಯಾಣ ಬೆಳೆಸಿದ್ದಾರೆ. ಗೌರಿ ರೋನಂಕಿ ನಿರ್ದೇಶನದ ‘ಪೆಳ್ಳಿ ಸಂದದಿ’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಏನೆಂದರೆ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ನಿರ್ದೇಶನದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಹೊಸ ವರ್ಷದ ಹೊಸ ಪಯಣದ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡಿದ ಶ್ರೀಲೀಲಾ, ‘ಹೊಸ ವರ್ಷಕ್ಕೆ ಪರಭಾಷೆಯ ಅವಕಾಶ ಸಿಕ್ಕಿದೆ. ಈ ಮೊದಲೇ ಹಲವು ಆಫರ್ ಬಂದಿದ್ದರೂ, ಅವು ಯಾವುವೂ ಇಷ್ಟೊಂದು ಹಿಡಿಸಿರಲಿಲ್ಲ. ಇದೀಗ ಹಿರಿಯ ನಿರ್ದೇಶಕರ ಸಿನಿಮಾವನ್ನೇ ಒಪ್ಪಿಕೊಂಡಿದ್ದೇನೆ. ಪಕ್ಕಾ ಕಮರ್ಷಿಯಲ್ ಲವ್ ಸ್ಟೋರಿ ಸಿನಿಮಾದಲ್ಲಿ ನನಗೆ ಟಾಲಿವುಡ್ ನಟ ಶ್ರೀಕಾಂತ್ ಪುತ್ರ ರೋಷನ್ ಮೇಕಾ ಜೋಡಿಯಾಗಲಿದ್ದಾರೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net