‘ಒಂದು ಕ್ರಿಕೆಟ್ ತಂಡಕ್ಕಾಗುವಷ್ಟು ಮಕ್ಕಳನ್ನು ಹೆರುವ ಆಸೆ ಇದೆ’; ಪ್ರಿಯಾಂಕಾ ಚೋಪ್ರಾ ಬಯಕೆ ಇದು!

Premiere Of Amazon Prime Video's "Chasing Happiness" - Arrivals
LOS ANGELES, CALIFORNIA - JUNE 03: Priyanka Chopra-Jonas, Nick Jonas arrives at the Premiere Of Amazon Prime Video's "Chasing Happiness" at Regency Bruin Theatre on June 03, 2019 in Los Angeles, California. (Photo by Steve Granitz/WireImage)
Published on

ಮುಂಬೈ: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಪತಿ ನಿಕ್ ಜೋನಸ್ ಜತೆ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಹಾಲಿವುಡ್​ನ ಸಿನಿಮಾಗಳಲ್ಲಿಯೂ ಬಿಜಿಯಾಗಿದ್ದಾರೆ. ಇತ್ತ ಮದುವೆಯಾಗಿ ಎರಡು ವರ್ಷ ಕಳೆದಿರುವ ಪ್ರಿಯಾಂಕಾ ಮಕ್ಕಳನ್ನು ಪಡೆದುಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ತಾಯ್ತನದ ಬಗ್ಗೆ ಮಾತನಾಡಿದ ಪ್ರಿಯಾಂಕಾ, ‘ನನಗೆ ಮಕ್ಕಳೆಂದರೆ ಇಷ್ಟ. ಮಗುವನ್ನು ಪಡೆಯಲು ಬಯಸುತ್ತಿದ್ದೇನೆ. ಎಷ್ಟು ಸಾಧ್ಯವಾಗುತ್ತದೋ ಅಷ್ಟು ಮಕ್ಕಳು. ಸಾಧ್ಯವಾದರೆ ಒಂದು ಕ್ರಿಕೆಟ್ ತಂಡ ಕಟ್ಟುವಷ್ಟು ಮಕ್ಕಳಾದರೂ ಪರವಾಗಿಲ್ಲ’ ಎಂದು ಪ್ರಿಯಾಂಕಾ ನಗೆ ಚಟಾಕಿ ಹಾರಿಸಿದ್ದಾರೆ.

ಕಳೆದ ಡಿಸೆಂಬರ್​ನಲ್ಲಷ್ಟೇ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ಪ್ರಿಯಾಂಕಾ, ಪತಿ ನಿಕ್ ಜತೆಗೆ ಕರೊನಾ ವೇಳೆ ಸಮಯ ಕಳೆಯಲು ಅವಕಾಶ ಸಿಕ್ಕಿತು ಎಂದೂ ಹೇಳಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತು ಸಿನಿಮಾ ವಿಚಾರವಾಗಿಯೂ ಸಾಕಷ್ಟು ವಿಚಾರಗಳನ್ನು ಒಟ್ಟಿಗೆ ಹಂಚಿಕೊಂಡಿದ್ದೇವೆ ಎಂಬುದು ಪ್ರಿಯಾಂಕಾ ಮಾತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net