ಲೆಟ್ಸ್ ಬ್ರೇಕಪ್ ಎಂದ ಶ್ರೀ-ರಚನಾ: ಚಿತ್ರ ಪ್ರಾರಂಭ; ಜ.1ರಿಂದ ಚಿತ್ರೀಕರಣ

Rachana
Published on

ಬೆಂಗಳೂರು: ‘ಲವ್ ಮಾಕ್ಟೇಲ್’ ನಂತರ ರಚನಾ ಇಂದರ್​ಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ರಿಷಭ್ ಶೆಟ್ಟಿ ಅಭಿನಯದ ‘ಹರಿಕಥೆ ಅಲ್ಲ ಗಿರಿಕಥೆ’, ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ಮತ್ತು ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ರಚನಾ, ಈ ಮಧ್ಯೆ ‘ಲೆಟ್ಸ್ ಬ್ರೇಕಪ್’ ಎಂಬ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಂದಿತ್ತು. ಆ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆದಿದೆ.

ಶ್ರೀ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದವರು ಹಾಜರಿದ್ದರು. ಸದ್ಯ ಸಿದ್ಧತೆ ನಡೆದಿದ್ದು, ಜನವರಿ ಒಂದರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ‘ಲೆಟ್ಸ್ ಬ್ರೇಕಪ್’ ಚಿತ್ರದಲ್ಲಿ ಶ್ರೀಮಹದೇವ್ ಮತ್ತು ರಚನಾ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.

ಶ್ರೀಮಹದೇವ್ ಇದಕ್ಕೂ ಮುನ್ನ ‘ಇರುವುದೆಲ್ಲವ ಬಿಟ್ಟು’ ಮತ್ತು ‘ಗಜಾನನ ಗ್ಯಾಂಗ್’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ಈ ಚಿತ್ರದವನ್ನು ಸ್ವರೂಪ್ ನಿರ್ದೇಶಿಸಿದ್ದು, ಅವರೇ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net