ಬೈರಾಗಿ ಶಿವಪ್ಪ: ಶಿವಣ್ಣ ಸಿನಿಮಾಗೆ ಮರುನಾಮಕರಣ

bairagi
Published on

ಬೆಂಗಳೂರು: ಶಿವರಾಜಕುಮಾರ್ ಈಗ ‘ಬೈರಾಗಿ’ಯಾಗಿದ್ದಾರೆ. ಇಷ್ಟು ಹೇಳುತ್ತಿದ್ದಂತೆ ಇದ್ಯಾವುದಿದು ಹೊಸ ಚಿತ್ರ ಎಂಬ ಪ್ರಶ್ನೆ ಬರಬಹುದು. ಬಹುಶಃ ಈ ಬಾರಿಯ ಹುಟ್ಟುಹಬ್ಬಕ್ಕೆ ಘೋಷಣೆಯಾಗಿರುವ ಹೊಸ ಚಿತ್ರವಿರಬಹುದು ಎಂದೆನಿಸಬಹುದು. ಹಾಗೇನಿಲ್ಲ, ‘ಶಿವಪ್ಪ’ ಚಿತ್ರಕ್ಕೆ, ಇದೀಗ ‘ಬೈರಾಗಿ’ ಎಂದು ಮರುನಾಮಕರಣ ಮಾಡಲಾಗಿದೆ. ‘ಶಿವಪ್ಪ’ ಚಿತ್ರದ ಹೆಸರು ಬದಲಾಗಲಿದೆ, ಹೊಸ ಹೆಸರನ್ನು ಶಿವರಾಜಕುಮಾರ್ ಹುಟ್ಟುಹಬ್ಬದಂದು ಘೋಷಿಸಲಾಗುತ್ತದೆ ಎಂದು ಚಿತ್ರತಂಡ ಮೊದಲೇ ಘೋಷಿಸಿತ್ತು. ಅದರಂತೆ ಸೋಮವಾರ ಸಂಜೆ, ಚಿತ್ರಕ್ಕೆ ‘ಬೈರಾಗಿ’ ಎಂಬ ಹೆಸರಿಡಲಾಗಿದೆ ಎಂದು ಅಧಿಕೃತವಾಗಿ ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಲಾಗಿದೆ. ಈ ಸಂಬಂಧ ಹೊಸ ಶೀರ್ಷಿಕೆ ಅನಾವರಣ ಟೀಸರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.

‘ಬೈರಾಗಿ’ ಜತೆಗೆ, ‘ಭಜರಂಗಿ 2’ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ. ಕಳೆದ ವರ್ಷ ಶಿವರಾಜಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಲಾಗಿತ್ತು. ಈಗ ಈ ಹುಟ್ಟುಹಬ್ಬಕ್ಕೆ ಶಿವರಾಜಕುಮಾರ್ ಅವರನ್ನು ಪರಿಚಯಿಸುವ ಟೀಸರ್ ಬಿಡುಗಡೆ ಮಾಡಲಾಗಿದೆ. ಇದಲ್ಲದೆ ಇನ್ನೊಂದೆರೆಡು ಹೆಸರಿಡದ ಚಿತ್ರಗಳ ಪೋಸ್ಟರ್​ಗಳು ಸಹ ಶಿವರಾಜಕುಮಾರ್ ಅವರಿಗೆ ಶುಭಕೋರಿವೆ. ಇನ್ನು, ಈ ಬಾರಿ ಹುಟ್ಟುಹಬ್ಬ ಆಚರಣೆ ಇಲ್ಲ ಎಂದು ಶಿವರಾಜಕುಮಾರ್ ಮೊದಲೇ ಹೇಳಿಬಿಟ್ಟಿದ್ದರು. ಅದರಂತೆ ಸೋಮವಾರ ತಮ್ಮ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಕುಟುಂಬದವರ ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net