More

    ಕೊನೆಗೂ ಅಗ್ನಿಶಾಮಕ ಅಧಿಕಾರಿ-ಸಿಬ್ಬಂದಿ ಕೊರಳನ್ನು ಅಲಂಕರಿಸಲಿದೆ ಸಿಎಂ ಪದಕ; 5 ವರ್ಷಗಳ ಬಳಿಕ ಪ್ರದಾನ!

    ಅತಿವಿಳಂಬಕ್ಕೆ ಅಧಿಕಾರಿಗಳಲ್ಲಿ ಅಸಮಾಧಾನ | ಪದಕಕ್ಕೆ ಆಯ್ಕೆಯಾದ 116 ಮಂದಿಯಲ್ಲಿ 16 ಮಂದಿ ನಿವೃತ್ತ, ಒಬ್ಬರು ನಿಧನ

    ಬೆಂಗಳೂರು: ಅಗ್ನಿ ದುರಂತ, ವಿಪತ್ತು ಮತ್ತು ತುರ್ತು ಸೇವೆಗಳಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಜನರ ಪ್ರಾಣ ಮತ್ತು ಆಸ್ತಿ ಕಾಪಾಡುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಕೊನೆಗೂ ಮುಖ್ಯಮಂತ್ರಿ ಪದಕ ಕೊರಳಿಗೆ ಬೀಳಲಿದೆ. 2016ರಿಂದ 2020ರ ನಡುವೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದ 116 ಅಧಿಕಾರಿ, ಸಿಬ್ಬಂದಿಗೆ 5 ವರ್ಷಗಳ ಬಳಿಕ ಅಂದರೆ ನಾಳೆ ಮಂಗಳವಾರ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಿಎಂ ಯಡಿಯೂರಪ್ಪ ಪದಕ ಪ್ರದಾನ ಮಾಡಲಿದ್ದಾರೆ. ಈ ಪೈಕಿ ಒಬ್ಬರು ಅಸುನೀಗಿದ್ದರೆ, 16 ಮಂದಿ ನಿವೃತ್ತರಾಗಿರುತ್ತಾರೆ.

    ಕರ್ತವ್ಯನಿಷ್ಠೆ ಮತ್ತು ಉತ್ತಮ ಸೇವೆಗೆ ಸಿಗುವ ಪದಕವನ್ನು ಸಮವಸ್ತ್ರದ ಮೇಲೆ ಧರಿಸಿಕೊಳ್ಳಬೇಕು ಹಾಗೂ ನಿವೃತ್ತಿ ಸಮಯದಲ್ಲಿ ಪದಕ ಧರಿಸಿಯೇ ನಿರ್ಗಮಿಸಬೇಕೆಂಬುದು ಪ್ರತಿಯೊಬ್ಬರ ಅಸೆ. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಗೆ ಮುಖ್ಯಮಂತ್ರಿಗಳ ಪದಕ ಮತ್ತು ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿ ಪದಕವನ್ನು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಘೋಷಣೆ ಮಾಡಿದಂತೆ ಅಗ್ನಿಶಾಮಕ ಅಧಿಕಾರಿ-ಸಿಬ್ಬಂದಿಗೂ ನೀಡಲಾಗುತ್ತದೆ.

    ಇದನ್ನೂ ಓದಿ: ಅಪರಾಧ ವರದಿಗಾರಿಕೆಯಲ್ಲಿ ಹೆಸರಾಗಿದ್ದ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಇನ್ನಿಲ್ಲ

    ಆಯಾ ವರ್ಷದ ಸೆಪ್ಟೆಂಬರ್ ಅಥವಾ ನವೆಂಬರ್‌ನಲ್ಲಿ ರಾಜಭವನದಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಪದಕ ಮತ್ತು ವಿಧಾನಸೌಧದಲ್ಲಿ ಸಿಎಂ ಅವರು ಮುಖ್ಯಮಂತ್ರಿ ಪದಕ ನೀಡಿ ಗೌರವಿಸುತ್ತಾರೆ. ಆದರೆ ಅಗ್ನಿಶಾಮಕ ಅಧಿಕಾರಿಗಳಿಗೆ ಮಾತ್ರ 5ರಿಂದ 6 ವರ್ಷಗಳ ಬಳಿಕ ಈ ಪದಕ ನೀಡಲಾಗುತ್ತದೆ. ಅಷ್ಟರಲ್ಲಿ ಹಲವರು ನಿವೃತ್ತಿಯಾಗಿದ್ದು, ಇಷ್ಟೊಂದು ವಿಳಂಬವಾಗಿರುವುದು ಅಗ್ನಿಶಾಮಕ ಸಿಬ್ಬಂದಿ ಅಸಮಾಧಾನಕ್ಕೆ ಕಾರಣವಾಗಿದೆ.

    ಗೃಹಇಲಾಖೆ ಅಡಿಯಲ್ಲೇ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇವೆ ಸಲ್ಲಿಸುತ್ತೇವೆ. ಎರಡು ಇಲಾಖೆಗೂ ಒಬ್ಬರೇ ಸಚಿವರು. ಆದರೆ, ಡಿಜಿಪಿಗಳು ಬೇರೆ ಬೇರೆ ಎನ್ನುವ ಮತ್ತು ನಾಲ್ಕೈದು ಮಂದಿಗೆ ಪದಕ ನೀಡಲು ಲಕ್ಷಾಂತರ ರೂ. ವೆಚ್ಚ ಮಾಡಬೇಕಲ್ಲ ಎಂಬ ಕಾರಣಕ್ಕೆ ಪದಕ ಪ್ರದಾನ ಮಾಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಪ್ರತಿವರ್ಷವೂ ಪದಕ ಘೋಷಣೆ ಮಾಡಿದ ವರ್ಷವೇ ಪೊಲೀಸ್ ಇಲಾಖೆ ಸಮಾರಂಭದಲ್ಲೇ ಅಗ್ನಿಶಾಮಕ ಸಿಬ್ಬಂದಿಗೆ ಪ್ರದಾನ ಮಾಡಬೇಕೆಂದು ಅಧಿಕಾರಿ-ಸಿಬ್ಬಂದಿಯ ಒತ್ತಾಯವಾಗಿದೆ.

    ಇದು ಕರೊನಾ ಲಸಿಕೆ ಇನ್ನೂ ಪಡೆಯದವರು ಓದಲೇಬೇಕಾದ ವಿಷಯ: ಹೊರಬಿತ್ತು ಮತ್ತೊಂದು ಅಧ್ಯಯನ ವರದಿ

    ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ವಂಚನೆ ಪ್ರಕರಣ ಸಿಬಿಐಗೆ ವಹಿಸಿ: ಗುಹಾ ಆಗ್ರಹ

    ಅಪರಾಧ ನಡೆದ ಸ್ಥಳಕ್ಕೆ ಇನ್ನು ಇವರು ಬರಲಿದ್ದಾರೆ; ಇದು ದೇಶದಲ್ಲೇ ಮೊದಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts