ನೀವು ಬಹು ದೊಡ್ಡ ಸ್ಫೂರ್ತಿ ಎಂದು ಶಿವಣ್ಣ ಹೇಳಿದ್ದು ಯಾರಿಗೆ?

Shivarajakumar - Final
Published on

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶಿವರಾಜಕುಮಾರ್, ಇತ್ತೀಚಿನ ಕೆಲವು ದಿನಗಳಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಲೇ ಬಂದಿದ್ದಾರೆ. ಸೋಮವಾರ ಅವರು ಕನ್ನಡ ಚಿತ್ರರಂಗದ ಪ್ರಾತಃಸ್ಮರಣೀಯರೊಬ್ಬರನ್ನು ನೆನಪಿಸಿಕೊಂಡಿದ್ದಾರೆ. ಅವರ‌್ಯಾರು ಗೊತ್ತಾ? ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾದ ಕೆ.ಎಸ್. ಅಶ್ವತ್ಥ್.

ಅಶ್ವತ್ಥ್ ಅವರು ಹುಟ್ಟುಹಬ್ಬ ಮಾರ್ಚ್ 25ಕ್ಕಾದರೂ, ಮೇ 25ರಂದು ಎಂದು ಸೋಮವಾರ, ಸೋಷಿಯಲ್ ಮೀಡಿಯಾದಲ್ಲಿ ತಪ್ಪಾಗಿ ಸುದ್ದಿಯಾಗಿತ್ತು. ಹುಟ್ಟುಹಬ್ಬ ತಪ್ಪಾಗಿ ನಮೂದಾಗಿದೆ ಎಂದು ಗೊತ್ತಿಲ್ಲದ ಹಲವರು, ಅಶ್ವತ್ಥ್ ಅವರನ್ನು ನೆನಪಿಸಿಕೊಂಡಿದ್ದರು. ಈ ನಿಟ್ಟಿನಲ್ಲಿ ಶಿವರಾಜಕುಮಾರ್ ಸಹ ತಾವು ನೋಡಿದ ಚಾಮಯ್ಯ ಮೇಷ್ಟ್ರು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ, ಸಮಯಕ್ಕೆ, ತನ್ನ ಕೆಲಸಕ್ಕೆ ಬೆಲೆ ಕೊಟ್ಟಂತಹ ವ್ಯಕ್ತಿ. ಕಲಾವಿದನಾಗಿ ನೀವು ನಡೆದುಕೊಂಡ ರೀತಿ ಮುಂದಿನ ಎಲ್ಲಾ ಪೀಳಿಗೆಗೂ ಬಹು ದೊಡ್ಡ ಸ್ಫೂರ್ತಿ. ಚಾಮಯ್ಯ ಮೇಷ್ಟ್ರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಶುಭಾಶಯ ಕೋರಿದ್ದಾರೆ.

ಅಶ್ವತ್ಥ್ ಮತ್ತು ಶಿವರಾಜಕುಮಾರ್ ಅವರ ಬಂಧ ಬಹಳ ಹಳೆಯದು. ಡಾ. ರಾಜಕುಮಾರ್ ಅವರ ಚಿತ್ರಗಳಲ್ಲಿ ಅಶ್ವತ್ಥ್ ಅವರ ಕಡ್ಡಾಯವಾಗಿ ಇರಲೇ ಬೇಕಿತ್ತು. ಇನ್ನು ‘ಮೋಡದ ಮರೆಯಲ್ಲಿ’, ‘ಇನ್‌ಸ್ಪೆಕ್ಟರ್ ವಿಕ್ರಮ್’, ‘ಚಿರಬಾಂಧವ್ಯ’, ‘ಅರಳಿದ ಹೂವುಗಳು’, ‘ಮೃತ್ಯುಂಜಯ’, ‘ಆಸೆಗೊಬ್ಬ ಮೀಸೆಗೊಬ್ಬ’, ‘ಸಂಯುಕ್ತ’ ಮುಂತಾದ ಚಿತ್ರಗಳಲ್ಲಿ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net