ನಾಗವಾರ ಜನತೆಗೆ ಆಸರೆಯಾದ ಶಿವಣ್ಣ ಬಾಯ್ಸ್ …

Aasare - Final
Published on

ಬೆಂಗಳೂರು: ಕರೊನಾ ಎರಡನೆಯ ಅಲೆಯಿಂದ ಉಂಟಾಗಿರುವ ಲಾಕ್​ಡೌನ್​ನಿಂದ ಜನ ತೀವ್ರ ಸಂಕಷ್ಟಕ್ಕೆ ಎದುರಾಗಿದ್ದಾರೆ. ಅದರಲ್ಲೂ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದೆ. ಈ ನಿಟ್ಟಿನಲ್ಲಿ ಕನ್ನಡದ ಹಲವು ನಟ-ನಟಿಯರು ಕಾರ್ಮಿಕರ ರಕ್ಷಣೆಗೆ ಬಂದಿದ್ದಾರೆ. ಅವರಿಗೆ ಅಗತ್ಯವಿರುವ ದವಸ-ಧಾನ್ಯಗಳಲ್ಲದೆ, ಕೆಲವರು ನಿತ್ಯ ಆಹಾರ ಸರಬರಾಜು ಮಾಡುತ್ತಿದ್ದಾರೆ.

ಈಗ ಹ್ಯಾಟ್ರಿಕ್​ ಹೀರೋ ಶಿವರಾಜಕುಮಾರ್​ ಮತ್ತು ಗೀತಾ ಶಿವರಾಜಕುಮಾರ್​ ಸಹ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಅಭಿಮಾನಿ ಬಳಗವಾದ ಶಿವಣ್ಣ ಬಾಯ್ಸ್​ ಜತೆಗೆ ಸೇರಿಕೊಂಡು, ತಾವು ನೆಲೆಸಿರೋ ನಾಗವಾರ ಏರಿಯಾದಲ್ಲಿ ಪ್ರತಿ‌ನಿತ್ಯ 500 ಜನರಿಗೆ ಊಟ, ತಿಂಡಿ ,ಹಾಗೂ ಟೀ ವ್ಯವಸ್ಥೆಯನ್ನ ಮಾಡಿದ್ದಾರೆ‌ ಶಿವಣ್ಣ. ಈ ಸೇವೆಗೆಂದೇ ಶಿವಣ್ಣ ಬೊಲೇರೋ ಕಾರ್​ ಆರೇಂಜ್ ಮಾಡಿದ್ದು, ಈ ವಾಹನದಲ್ಲೇ ಊಟ-ತಿಂಡಿ‌ ಸರಬರಾಜಾಗುತ್ತಿದೆ.

"ಆಸರೆ" - ಹಸಿದ ಹೊಟ್ಟೆಗೆ ಕೈ ತುತ್ತು ಅನ್ನೋ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರೋ ಈ ಕಾರ್ಯಕ್ರಮ, ಸದ್ಯ 10ದಿನದವರೆಗೂ  ಮುಂದುವರೆಯಲಿದೆ. ಲಾಕ್​ಡೌನ್ ಹೀಗೆ ಮುಂದುವರೆದಲ್ಲಿ‌ ಸುಮಾರು 1000 ಜನಕ್ಕೆ ಪ್ರತಿ ದಿನ ಅನ್ನ ದಾಸೋಹ ಮಾಡೋದಕ್ಕೆ ಯೋಜನೆಯನ್ನೂ ಶಿವಣ್ಣ ರೂಪಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net