

ಮುಂಬೈ: ಭಾರತೀಯ ವೆಬ್ಸೀರೀಸ್ಗಳ ಪೈಕಿ ಅತ್ಯಂತ ಜನಪ್ರಿಯವಾದ ವೆಬ್ಸೀರೀಸ್ ಎಂದರೆ ಅದು ದಿ ಫ್ಯಾಮಿಲಿ ಮ್ಯಾನ್. ಮನೋಜ್ ಬಾಜ್ಪೇಯಿ, ನ್ಯಾಷನಲ್ ಇಂಟಲಿಜೆನ್ಸ್ ಏಜನ್ಸಿಯ ಏಜೆಂಟ್ ಆಗಿ ನಟಿಸಿದ್ದ ಈ ವೆಬ್ಸರಣಿ, ಅಮೇಜಾನ್ ಪ್ರೈಮ್ನಲ್ಲಿ ಒಂದೂವರೆ ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.
ಇದನ್ನೂ ಓದಿ: ಚಿತ್ರರಂಗದವರಿಗೆ ಲಸಿಕೆ ವಿತರಿಸಲು ಫಿಲ್ಮ್ ಚೇಂಬರ್ ಮನವಿ
ಆ ನಂತರ ಈ ವೆಬ್ಸರಣಿಯ ಎರಡನೇ ಭಾಗ ಕಳೆದ ವರ್ಷ ಲಾಕ್ಡೌನ್ ಘೋಷಣೆಯಾಗುವುದಕ್ಕಿಂತ ಮುನ್ನವೇ ಚಿತ್ರೀಕರಣವಾಗಿತ್ತು. ಪೋಸ್ಟ್-ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದ್ದು, ಈ ವರ್ಷ ಫೆಬ್ರವರಿ 12ಕ್ಕೆ ಬಿಡುಗಡೆಯಾಗುವುದಾಗಿ ಸುದ್ದಿಯಾಗಿತ್ತು. ಆದರೆ, ತಾಂಡವ್ ಎಂಬ ಇನ್ನೊಂದು ವೆಬ್ಸೀರೀಸ್ನಿಂದ ಉಂಟಾದ ವಿವಾದದಿಂದಾಗಿ, ಈ ವೆಬ್ಸರಣಿ ಹೊರಬರಲೇ ಇಲ್ಲ. ಇದರಿಂದ ದಿ ಫ್ಯಾಮಿಲಿ ಸೀಸನ್ನ ಎರಡನೆಯ ಸೀಸನ್ಗಾಗಿ ಕಾದಿದ್ದ ಪ್ರೇಕ್ಷಕರಿಗೆ ಆದ ನಿರಾಸೆ ಅಷ್ಟಿಷ್ಟಲ್ಲ.
ಇದೀಗ ಬಂದಿರುವ ಸುದ್ದಿಯ ಪ್ರಕಾರ, ದಿ ಫ್ಯಾಮಿಲಿ ಮ್ಯಾನ್ 2 ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುವುದಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಜೂನ್ 11ರಂದು ಈ ವೆಬ್ಸರಣಿ ಸ್ಟ್ರೀಮ್ ಆಗಲಿದೆ. ಈಗಾಗಲೇ ಈ ಕಾರ್ಯಕ್ರಮದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಡಾನ್ನಿಂದ ತಪ್ಪಿಸಿಕೊಳ್ಳಲು ಮದುವೆಯಾದರಂತೆ ರಾಖಿ!
ದಿ ಫ್ಯಾಮಿಲಿ ಮ್ಯಾನ್ 2 ಕಾರ್ಯಕ್ರಮದ ವಿಶೇಷ ಆಕರ್ಷಣೆ ಎಂದರೆ ಅದು ಟಾಲಿವುಡ್ ನಟಿ ಸಮಂತಾ. ಇದೇ ಮೊದಲ ಬಾರಿಗೆ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ, ಪ್ರಿಯಾಮಣಿ ಸೇರಿದಂತೆ ಸಾಕಷ್ಟು ಜನಪ್ರಿಯ ನಟ-ನಟಿಯರು ಇದರಲ್ಲಿ ನಟಿಸಿದ್ದಾರೆ. ರಾಜ್ ಮತ್ತು ಡಿಕೆ ಈ ವೆಬ್ಸರಣಿಯನ್ನು ನಿರ್ದೇಶಿಸಿದ್ದಾರೆ.