ಬಹಳ ಕ್ಯೂಟ್​ ಆಗಿ ಕಾಣ್ತಿದ್ದೀಯ ... ಹಾಗಂತ ಶಿಲ್ಪಾ ಶೆಟ್ಟಿಗೆ ಕಾಂಪ್ಲಿಮೆಂಟ್​ ಮಾಡಿದ್ದು ಯಾರು?

Shilpa Shetty - Final
Published on

ಶಿಲ್ಪಾ ಶೆಟ್ಟಿ ಲಾಕ್​ಡೌನ್​ ಸಮಯದಲ್ಲಿ ಗಂಡ ಮತ್ತು ಮಕ್ಕಳ ಜತೆಗೆ ಜುಂ ಅಂತ ಇದ್ದಾರೆ. ಈ ಮಧ್ಯೆ ಅವರಿಗೆ ಯಾರೋ, 'ನೀನು ಬಹಳ ಕ್ಯೂಟ್​ ಅಂಡ್​ ಯಂಗ್​ ಆಗಿ ಕಾಣ್ತಿದ್ದೀಯ' ಅಂತ ಕಾಂಪ್ಲಿಮೆಂಟ್​ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿಯಂಥ ಶಿಲ್ಪಾ ಶೆಟ್ಟಿಗೆ ಹೀಗೆ ಕಾಂಪ್ಲಿಮೆಂಟ್​ ಮಾಡಿದ್ದು ಯಾರು ಎಂಬ ಪ್ರಶ್ನೆ ಬರಬಹುದು. ಬೇರೆ ಯಾರೋ ಅಲ್ಲ, ಅವರ ಮಗ ಎಂಟು ವರ್ಷದ ವಿಯಾನ್​.

ವಿಯಾನ್​ಗೆ ಇತ್ತೀಚೆಗೆ ತಮ್ಮ ಮೊದಲ ಚಿತ್ರ 'ಬಾಜಿಗರ್​' ತೋರಿಸಿದರಂತೆ ಶಿಲ್ಪಾ. 1993ರಲ್ಲಿ ಬಿಡುಗಡೆಯಾದ ಈ ಚಿತ್ರ ಸೂಪರ್ ಹಿಟ್​ ಆಗಿತ್ತು. ಈ ಚಿತ್ರದ ನಂತರ ಬರೀ ಶಾರೂಖ್​ ಖಾನ್​ ಮಾತ್ರವಲ್ಲ, ಅವರಿಗೆ ನಾಯಕಿಯಾಗಿ ನಟಿಸಿದ ಶಿಲ್ಪಾ ಶೆಟ್ಟಿ ಮತ್ತು ಕಾಜಲ್​ ಅವರ ಅದೃಷ್ಟ ಸಹ ಖುಲಾಯಿಸಿತು. ಇಬ್ಬರೂ ಆ ನಂತರ ಬಾಲಿವುಡ್​ನಲ್ಲಿ ಬೇಡಿಕೆಯ ನಟಿಯರಾದರು.

ಈ ಚಿತ್ರ ನೋಡಿದ ವಿಯಾನ್​, ಹೇಳಿದ್ದು ಒಂದೇ ಮಾತಂತೆ. 'ಮಾಮ, ಯೂ ಲುಕ್ಡ್​ ಸೋ ಕ್ಯೂಟ್​. ಸೋ ಯಂಗ್​ ...' ಅಂತ ಕಾಂಪ್ಲಿಮೆಂಟ್​ ಮಾಡಿದ್ದಾನೆ. ವಿಯಾನ್​ ಕಾಂಪ್ಲಿಮೆಂಟ್​ ಕೊಡುತ್ತಿದ್ದಾನೆ ಎನ್ನುವುದಕ್ಕಿಂತ ಹೆಚ್ಚಾಗಿ ತನಗೆ ಈಗ ವಯಸ್ಸಾಗಿದೆ ಎಂದು ನೆನಪಿಸುತ್ತಿದ್ದಾನೆ ಎಂದು ತಮಾಷೆ ಮಾಡುತ್ತಾರೆ ಶಿಲ್ಪಾ.

ಎಲ್ಲಾ ಸರಿ, 'ಬಾಜಿಗರ್​' ಬಿಟ್ಟರೆ, ಬೇರೆ ಯಾವುದಾದರೂ ಚಿತ್ರವನ್ನು ಶಿಲ್ಪಾ ತಮ್ಮ ಮಗನಿಗೆ ತೋರಿಸಿದ್ದಾರಾ? ಎಂಬ ಪ್ರಶ್ನೆ ಸಹಜವೇ. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, 'ನನಗೇನೋ ಅವನಿಗೆ ನನ್ನ ಇನ್ನೊಂದಿಷ್ಟು ಚಿತ್ರಗಳನ್ನು ತೋರಿಸುವುದಕ್ಕೆ ಆಸೆ. ಆದರೆ, ಅವನು ಏನೇನೋ ಪ್ರಶ್ನೆಗಳನ್ನು ಕೇಳುತ್ತಾನೆ. ಅದಕ್ಕೆಲ್ಲಾ ಏನು ಉತ್ತರಿಸಬೇಕು ಎನ್ನುವುದೇ ನನಗೆ ಗೊತ್ತಾಗುವುದಿಲ್ಲ' ಎಂದು ಶಿಲ್ಪಾ ಹೇಳಿಕೊಂಡಿದ್ದಾರೆ.

'ಬಾಜಿಗರ್​' ಅಲ್ಲದೇ, ಅಪ್ಪಂದಿರ ದಿನದ ಅಂಗವಾಗಿ ವಿಯಾನ್​ಗೆ 'ರಿಶ್ತೇ' ಚಿತ್ರವನ್ನೂ ಶಿಲ್ಪಾ ತೋರಿಸಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net