

ಬೆಂಗಳೂರು: ನಟಿ ಶರ್ವಿುಳಾ ಮಾಂಡ್ರೆ ಮತ್ತು ಸ್ನೇಹಿತರ ಕಾರು ಡಿಕ್ಕಿ ಪ್ರಕರಣ ರೋಚಕ ತಿರುವು ಪಡೆಯುತ್ತಿದೆ. ಏ.4ರ ಬೆಳಗಿನ ಜಾವ ಅಪಘಾತ ನಡೆದಾಗ ಶರ್ವಿುಳಾ ಮಾಂಡ್ರೆ ಮತ್ತು ಆಕೆಯ ಸ್ನೇಹಿತರಾದ ಲೋಕೇಶ್ ವಸಂತ್ ಸೇರಿ ಐವರು ಇದ್ದರು ಎನ್ನಲಾಗಿದೆ. ನಾಲ್ವರ ಹೇಳಿಕೆಯನ್ನು ಹೈಗ್ರೌಂಡ್ಸ್ ಸಂಚಾರ ಪೊಲೀಸರು ಪಡೆದು ಕೊಂಡಿದ್ದಾರೆ. ಇಲ್ಲಿಯವರೆಗೂ ಶರ್ವಿುಳಾ ಮಾಂಡ್ರೆ ಹೇಳಿಕೆ ಪಡೆದಿಲ್ಲ. ಪ್ರಕರಣದ ಮಾಹಿತಿಯನ್ನು ಮಾಧ್ಯಮಕ್ಕೆ ಕೊಡಲು ಸಂಚಾರ ಪೊಲೀಸರು ಹಿಂದೇಟು ಹಾಕುತ್ತಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕೆಲ ಮಾಹಿತಿ ಪ್ರಕಾರ ಶರ್ವಿುಳಾ ಮಾಂಡ್ರೆ ಜತೆಗೆ ಪ್ರತಿಷ್ಠಿತ ಟ್ರೇಡಿಂಗ್ ಕಂಪನಿ ಸಹ ಸಂಸ್ಥಾಪಕ, ಮಾಡಲ್ ಜತೆಗಿದ್ದರು. ಎಲ್ಲರಿಗೂ ಗಣ್ಯ ವ್ಯಕ್ತಿಗಳ ಕುಟುಂಬದ ಹಿನ್ನೆಲೆ ಇರುವುದರಿಂದ ಪೊಲೀಸರ ಮೇಲೆ ಪ್ರಭಾವಿ ವ್ಯಕ್ತಿಗಳ ಕಡೆಯಿಂದ ಒತ್ತಡ ಹಾಕಿಸಲಾಗುತ್ತಿದೆ. ಇದರಿಂದ ಪ್ರಕರಣದ ತನಿಖೆಗೆ ಅಡ್ಡಿ ಉಂಟಾಗಿದೆ ಎಂದು ಪೊಲೀಸರೇ ಒಪ್ಪಿಕೊಂಡಿದ್ದಾರೆ.
ಏ.3ರಂದು ಗಾಲ್ಪ್ ಕೋರ್ಟ್ ಸಮೀಪದ ಅಪಾರ್ಟ್ವೆುಂಟ್ನ ಫ್ಲಾ್ಯಟ್ನಲ್ಲಿ ಶರ್ವಿುಳಾ ಮಾಂಡ್ರೆ ಸೇರಿ 14 ಮಂದಿ ಪಾರ್ಟಿ ಮಾಡಿದ್ದರು. ಇದಾದ ಮೇಲೆ ಐವರು ಜಾಲಿರೇಡ್ಗೆ ಬಂದಾಗ ಅಪಘಾತ ಸಂಭವಿಸಿದೆ. ಪೊಲೀಸರ ವಿಚಾರಣೆ ವೇಳೆ ನಾಲ್ವರು ಗೊಂದಲದ ಹೇಳಿಕೆ ನೀಡಿದ್ದಾರೆ. ಕರ್ಫ್ಯೂ ವಿನಾಯಿತಿ ಪಾಸ್ ದುರುಪಯೋಗ ಸಂಬಂಧ ಅಂತಿಮ ತನಿಖೆ ನಡೆದಿಲ್ಲ. ಪ್ರಕರಣ ಸಂಬಂಧ ಜಾಲತಾಣದಲ್ಲಿ ಪೊಲೀಸರನ್ನು ಪ್ರಶ್ನೆ ಮಾಡುತ್ತಿದ್ದು, ವೈರಲ್ ಆಗುತ್ತಿದೆ.