'ಜವಾನ್​' ಆದ ಶಾರೂಖ್​ ಖಾನ್​; ಪುಣೆಯಲ್ಲಿ ಚಿತ್ರೀಕರಣ ಪ್ರಾರಂಭ

Shahrukh Khan - Final
Published on

ಪುಣೆ: ಮೂರು ವರ್ಷಗಳಿಂದ ಕ್ಯಾಮೆರಾದಿಂದ ದೂರವೇ ಇದ್ದ ಶಾರೂಖ್​ ಖಾನ್​, ಇದೀಗ ಬ್ಯಾಕ್​ ಟು ಬ್ಯಾಕ್​ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಅವರು 'ಪಠಾಣ್​' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯಬೇಕಿದ್ದು, ಮಧ್ಯೆ ಸಿಕ್ಕ ಗ್ಯಾಪ್​ನಲ್ಲಿ ಅವರು ಇನ್ನೊಂದು ಹೊಸ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಶಾರೂಖ್​ ಖಾನ್​ ನಟಿಸಲಿದ್ದಾರೆ, ಅವರಿಗೆ ನಾಯಕಿಯಾಗಿ ನಯನತಾರಾ ಆಯ್ಕೆಯಾಗಿದ್ದಾರೆ ಎಂಬ ವಿಷಯ ಹಳೆಯದೇ. ಈ ಚಿತ್ರಕ್ಕೆ ಇದೀಗ 'ಜವಾನ್​' ಎಂಬ ಹೆಸರನ್ನು ಇಡಲಾಗಿದ್ದು, ಸದ್ದಿಲ್ಲದೆ ಕಳೆದ ವಾರದಿಂದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಚಿತ್ರತಂಡವು ಪುಣೆಯಲ್ಲಿ ಬೀಡುಬಿಟ್ಟಿದ್ದು, ಅಲ್ಲಿ ಮಹತ್ವದ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ತೊಡಗಿಸಿಕೊಂಡಿದೆ.

ಇದೊಂದು ಪಕ್ಕಾ ಕಮರ್ಷಿಯಲ್​ ಚಿತ್ರ ಎಂದು ಹೇಳಲಾಗಿದ್ದು, ಅಂತಾರಾಷ್ಟ್ರೀಯ ವೆಬ್​ಸೀರೀಸ್​, 'ಮನ ಹೇಯ್ಸ್ಟ್​' ಆಧರಿಸಿ ಚಿತ್ರ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಶಾರೂಖ್​ ಖಾನ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಶಾರೂಖ್​ ಖಾನ್​ ಜತೆಗೆ ನಯನತಾರಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ, ಯೋಗಿ ಬಾಬು, ಸುನೀಲ್​ ಗ್ರೋವರ್​, ಮರಾಠಿ ನಟಿ ರುತುಜ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net