'ಅಂತಿಮ್​'ನಲ್ಲಿ ಸಲ್ಮಾನ್​ ಬದಲು ಶಾರೂಖ್​ ನಟಿಸಬೇಕಿತ್ತಂತೆ ...

Shahrukh Khan - Salman Khan - Final
Published on

ಮುಂಬೈ: 'ರಾಧೆ' ಎಂಬ ಚಿತ್ರದ ಚಿತ್ರೀಕರಣ ಮುಗಿಸಿರುವ ಸಲ್ಮಾನ್​ ಖಾನ್​, ಇದೀಗ 'ಅಂತಿಮ್​' ಎಂಬ ಚಿತ್ರದಲ್ಲಿ ನಟಿಸುತ್ತಿರುವುದು ಈಗಾಗಲೇ ಸುದ್ದಿಯಾಗಿದೆ. ಸಿಖ್​ ಪೊಲೀಸ್​ ಅಧಿಕಾರಿಯ ಗೆಟಪ್​ನಲ್ಲಿ ಸಲ್ಮಾನ್​ ಖಾನ್​ ಕಾಣಿಸಿಕೊಂಡ ವೀಡಿಯೋ ಮತ್ತು ಫೋಟೋಗಳು ಈಗಾಗಲೇ ವೈರಲ್​ ಆಗಿದೆ.

ಸಲ್ಮಾನ್​ಗೂ ಮುನ್ನ ಈ ಚಿತ್ರದಲ್ಲಿ ಶಾರೂಖ್​ ಖಾನ್ ನಟಿಸಬೇಕಿತ್ತು ಎಂಬ ಸುದ್ದಿ, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಹೌದು, ಮುಂಚೆ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಶಾರೂಖ್​ ಅವರನ್ನು ಕೇಳಲಾಗಿತ್ತಂತೆ. ಇದೆಲ್ಲಾ ಆಗಿದ್ದು ಲಾಕ್​ಡೌನ್​ಗೂ ಮುನ್ನ. ಆ ನಂತರ ಶಾರೂಖ್​ಗೆ 'ಪಠಾಣ್​' ಚಿತ್ರದ ಕಥೆ ಹೇಳಲಾಗಿದೆ.

ಲಾಕ್​ಡೌನ್​ ನಂತರ ಎರಡೂ ಚಿತ್ರಗಳು ಶುರುವಾಗಿವೆ. ಈ ಎರಡೂ ಚಿತ್ರಗಳ ಪೈಕಿ ಯಾವ ಚಿತ್ರ ಆಯ್ಕೆ ಮಾಡಿಕೊಳ್ಳಬೇಕು ಎಂಬ ಜಿಜ್ನಾಸೆ ಶಾರೂಖ್​ ಖಾನ್​ಗೆ ಉಂಟಾಯಿತಂತೆ. ಅಂತಿಮವಾಗಿ ಅವರು 'ಅಂತಿಮ್​' ಚಿತ್ರವನ್ನು ಕೈಬಿಟ್ಟು, 'ಪಠಾಣ್​' ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇನ್ನು, ಆ ಪಾತ್ರವನ್ನು ಇನ್ನಷ್ಟು ವಿಸ್ತರಿಸಿ, ಇನ್ನಷ್ಟು ಕಮರ್ಷಿಯಲ್​ ಅಂಶಗಳನ್ನು ಸೇರಿಸಿ, ಸಲ್ಮಾನ್​ಗೆ ಆಫರ್​ ಮಾಡಲಾಯಿತಂತೆ. ಸಲ್ಮಾನ್​ ಆ ಚಿತ್ರವನ್ನು ಒಪ್ಪಿಕೊಂಡಿದ್ದಷ್ಟೇ ಅಲ್ಲ, ಈಗಾಗಲೇ ತಮ್ಮ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಮರಾಠಿಯ 'ಮುನ್ಶಿ ಪ್ಯಾಟರ್ನ್​​' ಚಿತ್ರದ ರೀಮೇಕ್​ ಆದ 'ಅಂತಿಮ್​ - ದಿ ಫೈನಲ್ ಟ್ರೂಥ್​' ಚಿತ್ರದಲ್ಲಿ ಲ್ಯಾಂಡ್​ ಮಾಫಿಯಾದ ವಿರುದ್ಧ ಸಿಡಿದೇಳುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸಲ್ಮಾನ್​ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ವಿಶೇಷ. ಈ ಚಿತ್ರವನ್ನು ಮಹೇಶ್​ ಮಂಜ್ರೇಕರ್​ ನಿರ್ದೇಶನ ಮಾಡುತ್ತಿದ್ದು, ಮುಂದಿನ ವರ್ಷ ಈದ್​ ಸಂದರ್ಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net