ಬಾಲಿವುಡ್​ಗೆ ಆಕ್ಸಿಜನ್​ ಕೊಡುತ್ತಾನಾ 'ಪಠಾಣ್​'? ಚಿತ್ರದ ಬಗ್ಗೆ ಹೆಚ್ಚಾದ ನಿರೀಕ್ಷೆ …

Pathaan 18
Published on

ಮುಂಬೈ: ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರದ ಬಿಡುಗಡೆಗೆ ಇನ್ನು ಒಂದೇ ಒಂದು ದಿನ ಇದೆ. ಬುಧವಾರ (ಜನವರಿ 25) ಜಗತ್ತಿನಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದ್ದು, ಸೋತು ಸೊರುಗುತ್ತಿರುವ ಬಾಲಿವುಡ್​ಗೆ 'ಪಠಾಣ್​' ಹೊಸ ಆಕ್ಸಿಜನ್​ ನೀಡಬಹುದು ಎಂಬ ನಿರೀಕ್ಷೆ ಅಲ್ಲಿನ ಮಂದಿಯಲ್ಲಿ ಹೆಚ್ಚಾಗುತ್ತಿದೆ.

'ಪಠಾಣ್​' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್​ ಈಗಾಗಲೇ ಜನವರಿ 20ರಂದು ಶುರುವಾಗಿದ್ದು, ಮೊದಲ ದಿನದ ಎರಡು ಲಕ್ಷ ಟಿಕೆಟ್​ಗಳು ಈಗಾಗಲೇ ಮಾರಾಟವಾಗಿರುವ ಸುದ್ದಿ ಇದೆ. ಬೆಂಗಳೂರಿನಲ್ಲೊಂದೇ ಮೊದಲ ದಿನಕ್ಕೆ  ಇನ್ನು, ನಂತರದ ದಿನಗಳ ಟಿಕೆಟ್​ಗಳಿಗೂ ಸಹ ಒಳ್ಳೆಯ ಬೇಡಿಕೆ ಇದ್ದು, ಸಾಲುಸಾಲು ರಜೆಗಳಿರುವ ಕಾರಣ, ಮೊದಲ ಐದು ದಿನ ಎಲ್ಲ ಕಡೆ ಹೌಸ್​ಫುಲ್​ ಆಗುವ ಸಾಧ್ಯತೆ ಇದೆ.

ಬಾಲಿವುಡ್​ ಮಂದಿಯ ಲೆಕ್ಕಾಚಾರದ ಪ್ರಕಾರ, 'ಪಠಾಣ್​' ಮೊದಲ ದಿನ ಭಾರತದಲ್ಲಿ 40 ಕೋಟಿ ರೂ. ಗಳಿಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಮೊದಲ ದಿನದಂದು ಚಿತ್ರದ ಬಗ್ಗೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಬಂದರೆ, ಆಗ ಚಿತ್ರವು ಒಟ್ಟಾರೆ ಐದು ದಿನಗಳಲ್ಲಿ 200 ಕೋಟಿ ರೂ.ಗಳಿಗೂ ಹೆಚ್ಚು ಸಂಪಾದಿಸಬಹುದು ಎಂಬ ಮಾತಿದೆ.

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನ ಯಾವೊಂದು ಚಿತ್ರ ಕಡಿಮೆ ಸಮಯದಲ್ಲಿ ಇಷ್ಟೊಂದು ಗಳಿಕೆ ಮಾಡಿದ ಉದಾಹರಣೆಯೇ ಇರಲಿಲ್ಲ. ಕಡಿಮೆ ಸಮಯದಲ್ಲಿ ಬಿಡಿ, ಎಷ್ಟೊಂದು ಚಿತ್ರಗಳ ಒಟ್ಟಾರೆ ಗಳಿಕೆಯೇ ಇಷ್ಟೊಂದು ಆಗಿರಲಿಲ್ಲ. ಅಂಥದ್ದೊಂದು ಪವಾಡವನ್ನು 'ಪಠಾಣ್​' ಮಾಡಬಲ್ಲನಾ? ಸಾಕಷ್ಟು ಸೋತು ಸುಣ್ಣವಾಗಿರುವ ಬಾಲಿವುಡ್​ಗೆ ಜೀವ ತುಂಬಬಲ್ಲನಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇದೆ.

'ಪಠಾಣ್​' ಚಿತ್ರದಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ, ಡಿಂಪಲ್​ ಕಪಾಡಿಯಾ ಮುಂತಾದವರು ಅಭಿನಯಿಸಿದ್ದಾರೆ. ಯಶ್​ರಾಜ್​ ಫಿಲಂಸ್​ನಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದು, ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net