

ಮುಂಬೈ: ಬಾಲಿವುಡ್ನಲ್ಲಿ 'ಬಡೆ ಮಿಯಾ ಚೋಟೆ ಮಿಯಾ' ಎಂದರೆ ಮೊದಲಿಗೆ ನೆನಪಿಗೆ ಬರುವುದು 90ರ ದಶಕದಲ್ಲಿ ಬಿಡುಗಡೆಯಾದ ಅಮಿತಾಭ್ ಬಚ್ಚನ್ ಮತ್ತು ಗೋವಿಂದ ಅಭಿನಯದ ಚಿತ್ರ. ಈಗ ಅದೇ ಹೆಸರಿನ ಚಿತ್ರವೊಂದು ತಯಾರಾಗುತ್ತಿದ್ದು, ಈ ಬಾರಿ 'ಬಡೆ ಮಿಯಾ, ಚೋಟೆ ಮಿಯಾ' ಆಗಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಮೊದಲ ಚಿತ್ರದ ತರಹ ಇದು ಕಾಮಿಡಿ ಚಿತ್ರವಲ್ಲ. ಇದೊಂದು ಪಕ್ಕಾ ಆಕ್ಷನ್ ಚಿತ್ರವಾಗಿದ್ದು, ಇದುವರೆಗೂ ಭಾರತೀಯ ಚಿತ್ರರಂಗದ ಯಾವುದೇ ಚಿತ್ರದಲ್ಲೂ ನೋಡಿರದ ಸ್ಟಂಟ್ಗಳನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆಯಂತೆ. ಅದಕ್ಕಾಗಿಯೇ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಸಾಕಷ್ಟು ತಯಾರಿ ಮಾಡಿಕೊಂಡು, ಇದೀಗ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ.
ವಿಶೇಷವೆಂದರೆ, ಮೊದಲ ಚಿತ್ರವನ್ನು ನಿರ್ಮಿಸಿದ್ದು ಪೂಜಾ ಫಿಲಂಸ್ನ ವಾಶು ಭಾಗ್ನಾನಿ. ಈಗ ಈ ಚಿತ್ರವನ್ನೂ ಅವರೇ ನಿರ್ಮಿಸುತ್ತಿದ್ದು, ಅಬ್ಬಾಸ್ ಅಲಿ ಜಫರ್ ನಿರ್ದೇಶನದ ಮಾಡುತ್ತಿದ್ದಾರೆ.
'ಬಡೆ ಮಿಯಾ, ಚೋಟೆ ಮಿಯಾ' ಚಿತ್ರದಲ್ಲಿ ಮಲಯಾಳಂ ಸೂಫರ್ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಮಿಕ್ಕಂತೆ ಮಾನುಷಿ ಚಿಲ್ಲರ್, ಆಲಯಾ, ಸೋನಾಕ್ಷಿ ಸಿನ್ಹಾ, ರೋನಿತ್ ರಾಯ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.