VIDEO: ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಇವ್ರು ಶಾಹಿದ್​ ಕಪೂರೇ!; ಏನೋ ಮಾಡಲು ಹೋಗಿ...

collage (9)
Published on

ಮುಂಬೈ: ಸಿನಿಮಾ ಮಂದಿ ಸೋಷಿಯಲ್​ ಮೀಡಿಯಾದಲ್ಲಿ ಸದಾ ಸಕ್ರಿಯರು. ಒಂದಿಲ್ಲೊಂದು ಪೋಸ್ಟ್ ಹಾಕುತ್ತ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ. ಜತೆಗೆ ಸಿನಿಮಾ ಸ್ಟಾರ್​ಗಳು ತಾವು ಮಾಡಿದ ಒಂದಷ್ಟು ಅವಾಂತರಗಳನ್ನು ಅಭಿಮಾನಿಗಳೇ ಶೇರ್​ ಮಾಡಿಕೊಂಡು, ಟ್ರೋಲ್​ ಸಹ ಮಾಡುತ್ತಾರೆ. ಇದೀಗ ಚಿತ್ರ ವಿಚಿತ್ರವಾದ ವಿಡಿಯೋವೊಂದನ್ನು ನಟ ಶಾಹಿದ್​ ಕಪೂರ್​ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಕ್ರ ವಕ್ರವಾಗಿ ಮುಖದ ಹಾವ ಭಾವವನ್ನು ವಿಡಿಯೋ ಮಾಡಿಕೊಂಡ ಶಾಹಿದ್​ ಕಪೂರ್, ಅದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ನೋಡಿದಾಕ್ಷಣ ನಿಜಕ್ಕೂ ಇವರು ಶಾಹಿದ್​ ಕಪೂರೇನಾ ಎಂಬ ಪ್ರಶ್ನೆ ಮೂಡದೇ ಇರದು.

ಹಾಗೆ ಹಂಚಿಕೊಂಡ ವಿಡಿಯೋಕೆ ಬಗೆಬಗೆಯ ಕಮೆಂಟ್​ಗಳು ಸಂದಾಯವಾಗುತ್ತಿದ್ದು, ಒಂದಷ್ಟು ಮಂದಿ ನಟನ ಹುಚ್ಚಾಟವನ್ನು ತೆಗಳಿದರೆ, ಮತ್ತೆ ಕೆಲವರು ಲೈಕ್​ ಮಾಡಿದ್ದಾರೆ. ಹೀಗೆ ಮುಂದುವರಿದರೆ, ನಿನ್ನನ್ನೂ ಅನ್​ಫಾಲೋ ಮಾಡುತ್ತೇನೆ ಎಂದೂ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಸದ್ಯ ಟಾಲಿವುಡ್​ನ ಜೆರ್ಸಿ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ ಮಾಡುತ್ತಿರುವ ಶಾಹಿದ್​, ಆ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸದಾಗಿ ಶಶಾಂಕ್​ ಕೈತಾನ್​ ನಿರ್ದೇಶನದ ಸಿನಿಮಾದಲ್ಲಿಯೂ ಶಾಹಿದ್ ನಟಿಸುವುದು ಅಧಿಕೃತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net