‘ಕಿಂಗ್ ಈಸ್ ಬ್ಯಾಕ್’ ಎಂದ ನೆಟ್ಟಿಗರು! ಉದ್ದ ಕೂದಲು, ಸೂಪರ್ ಹಾಟ್ ಶಾರುಖ್...

Published on
ಮುಂಬೈ: ಬಾಲಿವುಡ್ ಕಿಂಗ್ ಖಾನ್ ಎಂದೇ ಹಸರು ಮಾಡಿರುವ ನಟ ಶಾರುಖ್ ಖಾನ್ ಅವರನ್ನು 2016ರಲ್ಲಿ ದುಬೈನ ಪ್ರವಾಸೋದ್ಯಮದ ಪ್ರಚಾರ ರಾಯಭಾರಿ ಮಾಡಲಾಗಿತ್ತು. ಇನ್ನು ಅಂದಿನಿಂದ ನಟ ಶಾರುಖ್ ಖಾನ್ ಹಲವು ಜಾಹೀರಾತುಗಳಲ್ಲಿ ಅಭಿನಯಿಸಿ ದುಬೈನ ಪ್ರಸಿದ್ದ ತಾಣಗಳನ್ನು, ಹೋಟೆಲ್​ಗಳನ್ನು ಪ್ರಮೋಟ್ ಮಾಡುತ್ತಲೆ ಬಂದಿದ್ದಾರೆ. ಈಗ, ಇದೇ ಪ್ರಾಚರದ ಅಂಗವಾಗಿ ಹೊಸ ಜಾಹೀರಾತಿನ ವಿಡಿಯೋವೊಂದನ್ನು ದುಬೈನಲ್ಲಿ ರಿಲೀಸ್ ಮಾಡಲಾಗಿದೆ. ಅದರಲ್ಲಿ, ನಟ ಶಾರುಖ್​ ಅವರ ಹೊಸ ಲುಕ್​ ನೋಡಿ ನೆಟ್ಟಿಗರು, ಅದರಲ್ಲಿಯೂ ಶಾರುಖ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟ ಶಾರುಖ್ ಖಾನ್ ಎಂದರೆ ದುಬೈ ಮಂದಿಗೆ ಹುಚ್ಚು ಪ್ರೀತಿ. ಅದೇ ರೀತಿ ಶಾರುಖ್ ಅವರಿಗೆ ದುಬೈನ ಪಾಮ್ ಬೀಚ್​ನಲ್ಲಿ ಒಂದು ವಿಲ್ಲಾ ಇದ್ದು, ಅವರಿಗೂ ದುಬೈ ಬಗ್ಗೆ ವಿಶೇಷ ಒಲವು ಇದೆ.
ಶೂಟಿಂಗ್ ಇಲ್ಲದ ಹಾಗೂ ಬಿಡುವು ಇರುವ ಸಮಯದಲ್ಲಿ ಶಾರುಖ್ ದುಬೈನಲ್ಲಿ ತಮ್ಮ ವಿಲ್ಲಾದಲ್ಲಿ ಕಾಲ ಕಳೆಯುತ್ತಾರೆ ಎಂಬ ಮಾತಿದೆ. ದುಬೈನ ಪ್ರವಾಸಿ ತಾಣಗಳು ಕೂಡಾ ಶಾರುಖ್ ಅವರಿಗೆ ತುಂಬಾನೆ ಇಷ್ಟ. ಇನ್ನು, ಈ ಹೊಸ ಜಾಹೀರಾತಿನ ವಿಡಿಯೋದಲ್ಲಿ ಶಾರುಖ್ ಹೊಸದೊಂದು ಗೆಟಪ್​ನಲ್ಲಿ ಸಿಕ್ಕಾಪಟ್ಟೆ ಮಿಂಚಿದ್ದು, ದುಬೈನ ಹಲವು ಪ್ರವಾಸಿ ತಾಣಗಳನ್ನು ವಿಭಿನ್ನವಾಗಿ ಪರಿಚಯಿಸಿದ್ದಾರೆ. ಶಾರುಖ್ ಅವರನ್ನು ಉದ್ದ ಕೂದಲಿನಲ್ಲಿ ಕಂಡ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಜತೆಗೆ, ಜಾಹೀರಾತಿನಲ್ಲಿ ಬಿಂದಾಸ್​ ಆಗಿ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ನಟ ಸಖತ್ ರಂಜಿಸಿದ್ದಾರೆ. ಶಾರುಖ್ ಅವರನ್ನು ಈ ಜಾಹೀರಾತಿನಲ್ಲಿ ಖುಷಿಯಾಗಿ ಕಂಡ ಅಭಿಮಾನಿಗಳು ಈಗ ‘ಕಿಂಗ್ ಈಸ್ ಬ್ಯಾಕ್’ ಎಂದು ಹೇಳಲು ಆರಂಭಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net