ಈ ಫೋಟೋಗಳಲ್ಲಿ ನಟ ಶಾರುಖ್ ಅವರ ಮಗ ಅಬ್ರಾಮ್ ಖಾನ್ ಅವರ ತೊಡೆಯ ಮೇಲೆ ಮತ್ತು ಮಗಳು ಸುಹಾನಾ ಖಾನ್ ಅವರ ಪಕ್ಕದ ಸೀಟ್ನಲ್ಲಿ ಕುಳಿತಿರುವುದನ್ನು ಕಾಣಬಹುದು. ಹೀಗೆ, ನಟ ಶಾರುಖ್ ಖಾನ್ ಅವರು ತಮ್ಮ ನಿವಾಸ ಮನ್ನತ್ ಬಳಿಯ ಪ್ರದೇಶದಲ್ಲಿ ಮಕ್ಕಳ ಜತೆಗೆ ತಮ್ಮ ಕಾರನ್ನು ಓಡಿಸುತ್ತಿರುವುದು ಫೋಟೋಗಳಲ್ಲಿ ಕಂಡುಬಂದಿದೆ. ಅದರಲ್ಲಿಯೂ, ಮೊದಲ ಮಗ ಆರ್ಯನ್ ಖಾನ್ ಅವರ ಡ್ರಗ್ಸ್ ಪ್ರಕರಣದಿಂದ ಶಾರುಖ್ ಅವರು ಹೆಚ್ಚು ಆಚೆ ಕಾಣಿಸಿಕೊಂಡಿಲ್ಲ. ಇದೀಗ, ಡ್ರಗ್ಸ್ ಕೇಸ್ನ ಚಿಂತೆ ನಟನಿಗೆ ಇಲ್ಲದಂತೆ ಕಾಣಿಸುತ್ತಿದೆ. ಆದರೆ, ಶಾರುಖ್ ಅವರು ಯಾವಾಗಲೂ ಫ್ಯಮಿಲಿ ಮ್ಯಾನ್ ಆಗಿದ್ದರು. ಇನ್ನು, ಅವರೊಂದು ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಹೇಳಲು, ಈಗಿನ ಫೋಟೋಗಳು ಸಹ ಒಂದೊಳ್ಳೆ ಉದಾಹರಣೆಯಾಗಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.