

ಮುಂಬೈ: ಮಾರ್ಚ್ನಲ್ಲಿ ಕರೊನಾನಿಂದ ಲಾಕ್ಡೌನ್ ಶುರುವಾದಾಗಿನಿಂದಲೂ, 'ಬಾಲಿವುಡ್ ಬಾದ್ಷಾ' ಶಾರೂಖ್ ಖಾನ್ ಒಂದಲ್ಲಾ ಒಂದು ರೀತಿ ಸಹಾಯ ಮಾಡುತ್ತಲೇ ಇದ್ದಾರೆ. ಮೊದಲಿಗೆ ಕೋವಿಡ್ ಪೇಶಂಟ್ಗಳ ಚಿಕಿತ್ಸೆಗೆಂದು ಅವರು ತಮ್ಮ ಕಟ್ಟಡವನ್ನು ಬಿಟ್ಟುಕೊಟ್ಟರು. ನಂತರ ಪಿಎಂ ಕೇರ್ಸ್ ಫಂಡ್ಗೆ ಅವರು ಹಣಕಾಸಿನ ನೆರವನ್ನೂ ನೀಡಿದ್ದರು.
ಇದೀಗ ಶಾರೂಖ್ ಖಾನ್, ಚತ್ತೀಸ್ಗಡದ ಕರೊನಾ ವಾರಿಯರ್ಸ್ಗೆ ಎರಡು ಸಾವಿರ ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ಮೆಂಟ್ (ಪಿಪಿಇ) ಕಿಟ್ಗಳನ್ನು ಕೊಟ್ಟಿದ್ದಾರೆ. ಈ ಕಿಟ್ಗಳನ್ನು ಅವರು ತಮ್ಮ ಮೀರ್ ಫೌಂಡೇಶನ್ ಎಂಬ ಎನ್ಜಿಓದಿಂದ ಕೊಟ್ಟಿದ್ದಾರೆ.
ಶಾರೂಖ್ ಖಾನ್ ಅವರ ಈ ನಡೆ ನೋಡಿ ಚತ್ತೀಸ್ಗಡದ ಸಚಿವ ಟಿ.ಎಸ್. ಸಿಂಗ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಕರೊನಾ ವಿರುದ್ಧ ಹೋರಾಡುತ್ತಿರುವ ಸಾವಿರಾರು ವಾರಿಯರ್ಗಳಿಗೆ ಇದರಿಂದ ಬಹಳ ಅನುಕೂಲವಾಗಲಿದ್ದು, ನಿಮ್ಮ ನಡೆ ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನವರಾತ್ರಿ ಸಂಭ್ರಮ: ವಾದ್ಯ ನುಡಿಸುವುದು ನನ್ನ ಕೆಲಸ …
ಇದಕ್ಕೆ ಪ್ರತಿಕ್ರಿಯಿಸಿರುವ ಶಾರೂಖ್, ಇಂತಹ ಕಷ್ಟದ ಸಮಯದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಇದರಿಂದ ಒಂದಿಷ್ಟು ಜನರಿಗೆ ಸಹಾಯವಾಗಲಿ ಎಂದು ಆಶಿಸಿದ್ದಾರೆ.