

ಮುಂಬೈ : ಬಾಲಿವುಡ್ನ ವರ್ಸಟೈಲ್ ಹೀರೋ ರಣವೀರ್ ಸಿಂಗ್ ಅವರು ಇಂದು ಬೆಳ್ಳಂಬೆಳಿಗ್ಗೆಯೇ ತಮ್ಮ ಅಭಿಮಾನಿಗಳಿಗೆ ಭಾರೀ ಟ್ರೀಟ್ ಕೊಟ್ಟಿದ್ದಾರೆ. ಗುಚಿ ಕಂಪೆನಿಯ ಉಡುಗೆತೊಡುಗೆಗಳೊಂದಿಗೆ ಪೋಸ್ ಮಾಡಿರುವ ತಮ್ಮ ಆಕರ್ಷಕ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಗುಚಿ ಟ್ರ್ಯಾಕ್ಸೂಟ್ನ ಅವರ ಹೊಸ ಲುಕ್ನಲ್ಲಿ ಹಸಿರು ಜ್ಯಾಕೆಟ್ ಮತ್ತು ಮ್ಯಾಚಿಂಗ್ ಪ್ಯಾಂಟ್ಸ್, ಗುಚಿ ಹೆಡ್ ಬ್ಯಾಂಡ್ಗಳನ್ನು ಶೋಆಫ್ ಮಾಡಿದ್ದಾರೆ. ಜೊತೆಗೆ ಎರಡೆಳೆಯ ಮುತ್ತಿನ ಹಾರವನ್ನೂ ತೊಟ್ಟಿರುವ ರಣವೀರ್, ಬಿಳಿಯ ಸನ್ಗ್ಲಾಸಸ್ ಹಾಕಿಕೊಂಡು ತಮ್ಮ ಕೂದಲನ್ನು ಹಣೆ ಮತ್ತು ಕಣ್ಣುಗಳ ಮೇಲಕ್ಕೆ ಜಾರಿಸಿದ್ದಾರೆ.
ಈ ಸರಣಿ ಫೋಟೋಗಳ ಪೋಸ್ಟ್ಗೆ, "ನಿಮ್ಮ 'ಚಿ'ಅನ್ನು ಹುಡುಕಿಕೊಳ್ಳಿ ಎಂದರು. ಅದಕ್ಕೆ ನಾನು ಗುಚಿ ಪಡೆದೆ" ಎಂದು ಹಾಸ್ಯಮಯ ಶೀರ್ಷಿಕೆ ನೀಡಿದ್ದಾರೆ! ಅವರ ಈ ಪೋಸ್ಟ್ಗೆ ಎರಡು ಗಂಟೆಗಳಲ್ಲೇ 5.85 ಲಕ್ಷಕ್ಕೂ ಹೆಚ್ಚು ಲೈಕುಗಳ ಸುರಿಮಳೆಯಾಗಿದೆ.
ಇತ್ತೀಚೆಗಷ್ಟೇ, ರಣವೀರ್ ಮತ್ತೊಂದು ಗುಚಿ ಕಂಪೆನಿಯ ಫೋಟೋಶೂಟ್ನ ಚಿತ್ರಗಳನ್ನೂ ಶೇರ್ ಮಾಡಿಕೊಂಡಿದ್ದರು. ಈಚೆಗೆ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲದ ರಣವೀರ್, 'ದ ಬಿಗ್ ಪಿಚ್ಚರ್' ಎಂಬ ಗೇಮ್ ಶೋನೊಂದಿಗೆ ಸಣ್ಣ ತೆರೆಯನ್ನು ಪ್ರವೇಶಿಸಲು ಸಜ್ಜಾಗಿದ್ದಾರೆ. (ಏಜೆನ್ಸೀಸ್)