ಸರೋಜ್ ಖಾನ್ ಬಯೋಪಿಕ್​ಗೆ ರೆಮೋ ತಯಾರಿ

Saroj Khan
Published on

ಬಯೋಪಿಕ್​ಗಳಿಗೂ ಬಾಲಿವುಡ್​ಗೂ ಒಂದು ರೀತಿ ಅವಿನಾಭಾವ ನಂಟು. ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ, ಅತೀ ಹೆಚ್ಚು ಬಯೋಪಿಕ್​ಗಳು ನಿರ್ವಣವಾಗಿದ್ದು ಬಾಲಿವುಡ್​ನಲ್ಲಿ. ಈಗಾಗಲೇ ಇನ್ನೂ ಹಲವು ನಿರ್ಮಾಣ ಹಂತದಲ್ಲಿವೆ. ಇದೀಗ ಆ ಪಟ್ಟಿಗೆ ಮತ್ತೊಂದು ಸೇರ್ಪಡೆ ಸರೋಜ್ ಖಾನ್ ಬಯೋಪಿಕ್!

ಹೌದು, ತೀವ್ರ ಹೃದಯಾಘಾತದಿಂದ ಇತ್ತೀಚೆಗಷ್ಟೇ ನಿಧನ ಹೊಂದಿದ ಬಾಲಿವುಡ್​ನ ಹೆಸರಾಂತ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಕುರಿತ ಸಿನಿಮಾವನ್ನು ತೆರೆಮೇಲೆ ತರಲು ಬಾಲಿವುಡ್​ನ ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ನಿರ್ಧರಿಸಿದ್ದಾರೆ. ಈಗಾಗಲೇ ‘ಎಬಿಸಿಡಿ’, ‘ಎಬಿಸಿಡಿ 2’, ‘ರೇಸ್ 3’, ಮತ್ತು ‘ಸ್ಟ್ರೀಟ್ ಡಾನ್ಸರ್’ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಅನುಭವ ಇರುವ ರೆಮೋ, ಸರೋಜ್ ಖಾನ್ ಅವರ ನೃತ್ಯ ಜೀವನವನ್ನು ಬೆಳ್ಳಿತೆರೆ ಮೇಲೆ ತರಲಿದ್ದಾರಂತೆ.

ಅಂದಹಾಗೆ, ಸರೋಜ್ ಬದುಕಿದ್ದಾಗಲೇ ಅವರ ಬಗ್ಗೆ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದ ರೆಮೋ, ಈ ಮೊದಲೇ ಅವರ ಬಳಿ ಚರ್ಚೆ ಮಾಡಿದ್ದರಂತೆ. ಅವರಿಂದಲೂ ಸಮ್ಮತಿ ಸಿಕ್ಕಿತ್ತು ಎಂದೇ ಹೇಳಲಾಗುತ್ತಿದೆ. ಇದೀಗ ಅವರ ಕಾಲಾನಂತರ ಆ ಪ್ರಾಜೆಕ್ಟ್ ಶುರುವಾಗುತ್ತಿದ್ದು, ಶೀಘ್ರದಲ್ಲಿ ಅಪ್​ಡೇಟ್ ಮಾಹಿತಿಯೊಂದಿಗೆ ಆಗಮಿಸಲಿದ್ದಾರಂತೆ ನಿರ್ದೇಶಕ ರೆಮೋ. ಅಂದಹಾಗೆ, ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ, ನಿರ್ವಪಕರು ಯಾರು ಎಂಬುದು ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಿದ್ದಾರಂತೆ. -(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net