ಅಶ್ವತ್ಥಾಮನಿಗೆ ಸಾರಾ ಅಲಿ ಖಾನ್​ ನಾಯಕಿ

Sara
Published on

ಸಾರಾ ಅಲಿ ಖಾನ್ ಇದುವರೆಗೂ ಬೆರಳಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಪಕ್ಕದ್ಮನೆ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದೇ ಮೊದಲ ಬಾರಿಗೆ ಪಕ್ಕಾ ಆಕ್ಷನ್ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವುದಕ್ಕೆ ಅವರು ಸಜ್ಜಾಗಿದ್ದು, ಅದಕ್ಕಾಗಿ ಕುದುರೆ ಸವಾರಿ, ಮಾರ್ಷಲ್ ಆರ್ಟ್ಸ್ ಕಲಿಯುವುದಕ್ಕೆ ಮುಂದಾಗಿದ್ದಾರೆ. ‘ಉರಿ’ ಚಿತ್ರದ ನಂತರ ವಿಕ್ಕಿ ಕೌಶಾಲ್ ಅಭಿನಯದಲ್ಲಿ ‘ದಿ ಇಮ್ಮಾರ್ಟಲ್ ಆಫ್ ಅಶ್ವತ್ಥಾಮ’ ಎಂಬ ಚಿತ್ರವನ್ನು ಆದಿತ್ಯ ಧರ್ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಆ ಚಿತ್ರದ ಚಿತ್ರೀಕರಣ ಜೂನ್​ನಿಂದ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಸಾರಾ ಅಲಿ ಖಾನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಇದೊಂದು ಸೋಷಿಯೋ-ಫ್ಯಾಂಟಸಿ ಚಿತ್ರವಾಗಿದ್ದು, ಇದರಲ್ಲಿ ಸಾಕಷ್ಟು ಸಾಹಸ ದೃಶ್ಯಗಳಿವೆಯಂತೆ. ಬರೀ ನಾಯಕನಷ್ಟೇ ಅಲ್ಲ, ನಾಯಕಿ ಸಹ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಬೇಕಾಗಿದ್ದು, ಅದಕ್ಕಾಗಿ ಸಾರಾ ಸದ್ಯದಲ್ಲೇ ತಯಾರಿ ಶುರು ಮಾಡಲಿದ್ದಾರೆ. ಮೊದಲ ಹಂತವಾಗಿ ಮಾರ್ಷಲ್ ಆರ್ಟ್ಸ್ ಮತ್ತು ಕುದುರೆ ಸವಾರಿಯನ್ನು ಸಾರಾ ಕಲಿಯಲಿದ್ದು, ಮುಂದಿನ ಮೂರು ತಿಂಗಳ ಕಾಲ ತರಬೇತಿ ಪಡೆದು ಆ ನಂತರ ಕ್ಯಾಮೆರಾ ಎದುರಿಸಲಿದ್ದಾರೆ ಎಂದು ಹೇಳಲಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net