ಮದುವೆಗೆ ಹೊರಟಿದ್ದವರ ಮರಣ: ಭೀಕರ ಅಪಘಾತದಲ್ಲಿ ಬಾಲಕಿಯರಿಬ್ಬರು ಸ್ಥಳದಲ್ಲೇ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ

Ace
ಮೂರು ಪಲ್ಟಿಯಾಗಿ ನಾಲೆಗೆ ಬಿದ್ದ ವಾಹನ
Published on

ಮೈಸೂರು: ಮದುವೆ ಮಂಟಪಕ್ಕೆ ತೆರಳುತ್ತಿದ್ದ ವಾಹನ ಭೀಕರ ಅಪಘಾತಕ್ಕೆ ಒಳಗಾಗಿ ಬಾಲಕಿಯರಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೆ.ಆರ್.ನಗರ ತಾಲೂಕಿನ ಹೊಸೂರು-ಹಳಿಯೂರು ರಸ್ತೆಯಲ್ಲಿ ಇಂದು ರಾತ್ರಿ ಈ ಅಪಘಾತ ಸಂಭವಿಸಿದೆ. ಮೈಸೂರು ಜಿಲ್ಲೆಯ ಶ್ರೀರಾಮಪುರದಲ್ಲಿ ನಾಳೆ ನಡೆಯಲಿರುವ ಮದುವೆಗೆ ಇವರೆಲ್ಲ ಕುಪ್ಪೆ ಗ್ರಾಮದಿಂದ ಟಾಟಾ ಏಸ್​ ವಾಹನದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಏಸ್​ ವಾಹನ ಮೂರು ಬಾರಿ ಪಲ್ಟಿ ಹೊಡೆದಿದ್ದು, ಕಟ್ಟೆಪುರ ನಾಲೆಗೆ ಉರುಳಿದೆ.

ಪರಿಣಾಮ ವಾಹನದಲ್ಲಿದ್ದ ಕುಪ್ಪೆ ಗ್ರಾಮದ ಕೃಷ್ಣಯ್ಯ ಎಂಬವರ ಪುತ್ರಿರಾದ ಪುಷ್ಪಲತಾ (10), ಪಲ್ಲವಿ (9) ಸ್ಥಳದಲ್ಲೇ ಮೃತಪಟ್ಟರು. ಇತರ ಹತ್ತು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೆ.ಆರ್.ನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಆರ್.ನಗರ, ಚುಂಚಕಟ್ಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net