ಸುಶಾಂತ್​ ಆತ್ಮಹತ್ಯೆ ಪ್ರಕರಣ: ಸುದೀರ್ಘ 3 ಗಂಟೆ ವಿಚಾರಣೆ ಎದುರಿಸಿದ ಬನ್ಸಾಲಿ

bhansali-1593681993
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆ ವಿಚಾರವಾಗಿ ಈಗಾಗಲೇ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕುಟುಂಬದವರು, ಹಿತೈಷಿಗಳು, ಮನೆಗೆಲಸದವರು… ಹೀಗೆ 30ಕ್ಕೂ ಹೆಚ್ಚು ಜನರನ್ನು ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈಗ ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿಗೂ ಸಹ ಸುದೀರ್ಘ 3 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆ

ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತವನ್ನು ಪೋಷಿಸುವವರಲ್ಲಿ ಸಂಜಯ್​ ಲೀಲಾ ಬನ್ಸಾಲಿ ಸಹ ಒಬ್ಬರು ಮತ್ತು ಅವರು ಸುಶಾಂತ್​ ಸಿಂಗ್​ ಅವರನ್ನು ತಮ್ಮ ಚಿತ್ರಗಳಿಂದ ದೂರ ಇಟ್ಟಿದ್ದ ಕಾರಣಕ್ಕೆ, ಸುಶಾಂತ್​ ಬಹಳ ನೊಂದಿದ್ದರು ಎಂದು ಹೇಳಲಾಗುತ್ತಿತ್ತು. ಈ ಸಂಬಂಧ ಪೊಲೀಸರು ಬನ್ಸಾಲಿ ಅವರನ್ನು ವಿಚಾರಣೆ ನಡೆಸಿದ್ದು ಒಂದಷ್ಟು ಮಹತ್ವದ ಮಾಹಿತಿಯನ್ನು ಕಲೆಹಾಕಿದ್ದಾರೆ.

ಸೋಮವಾರ ಬೆಳಗ್ಗೆ 12.30ರ ಸುಮಾರಿಗೆ ತಮ್ಮ ಪರ ವಕೀಲರೊಂದಿಗೆ ಆಗಮಿಸಿದ ಬನ್ಸಾಲಿ, ಹಲವು ಕೋನಗಳಿಂದ ಪ್ರೊಡಕ್ಷನ್​ ಹೌಸ್​ ಮತ್ತು ಸುಶಾಂತ್​ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗುತ್ತಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ, ಬನ್ಸಾಲಿ, ‘ರಾಮ್​-ಲೀಲಾ’, ‘ಬಾಜಿರಾವ್​ ಮಸ್ತಾನಿ’ ಮತ್ತು ‘ಪದ್ಮಾವತ್​’ ಚಿತ್ರದಲ್ಲಿ ಹೀರೋ ಪಾತ್ರಗಳಿಗೆ ಸುಶಾಂತ್​ ಅವರನ್ನು ಪರಿಗಣಿಸಿದ್ದರಂತೆ. ಅಷ್ಟೇ ಅಲ್ಲ, ಈ ಸಂಬಂಧ ಸುಶಾಂತ್​ ಜತೆಗೆ ಮಾತನಾಡಿದ್ದರಂತೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net