ಆಗಸದಲ್ಲಿ ರಾರಾಜಿಸಲಿದ್ದಾರೆ ಸುಶಾಂತ್​ ಸಿಂಗ್​ ರಜಪೂತ್​...!

Sushanth singh
Published on

ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ಇರಲಿದ್ದಾರೆ ಎನ್ನುವುದಂತೂ ಸತ್ಯ. ಇದೀಗ ಆಗಸದಲ್ಲೂ ರಾರಾಜಿಸುವ ಯೋಗ ಅಗಲಿದ ನಟನಿಗೆ ಒಲಿದು ಬಂದಿದೆ.

ನಟನ ಅಭಿಮಾನಿಯೊಬ್ಬಳು ನಕ್ಷತ್ರವೊಂದಕ್ಕೆ ಸುಶಾಂತ್​ ಸಿಂಗ್​ ರಜಪೂತ್​ ಹೆಸರಿಟ್ಟಿದ್ದಾಳೆ. ಅದರ ಪ್ರಮಾಣ ಪತ್ರವನ್ನು ಟ್ವಿಟರ್​ ಪೇಜ್​ನಲ್ಲಿ ಹಂಚಿಕೊಂಡು ಅಸಂಖ್ಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ.

ಅಷ್ಟಕ್ಕೂ ಸುಶಾಂತ್​ಗೆ ಬಾಹ್ಯಾಕಾಶವೆಂದರೆ ಇನ್ನಿಲ್ಲದ ಪ್ರೀತಿ. ನಕ್ಷತ್ರಗಳ ಬಗ್ಗೆಯೂ ಅಧ್ಯಯನ ನಡೆಸಿದ್ದ. ಹೀಗಾಗಿ ನಕ್ಷತ್ರವೊಂದಕ್ಕೆ ಆತನ ಹೆಸರಿಡುವುದು ಯೋಗ್ಯವಾದ ಕಾರ್ಯವೆಂದು ಅಭಿಮಾನಿ ರಕ್ಷಾ ಎಂಬುವರು ಹೇಳಿದ್ದಾರೆ.

ಎಲ್ಲಿದೆ ನಕ್ಷತ್ರ?: ನಕ್ಷತ್ರದ ಸ್ಥಳದ ಬಗ್ಗೆ ನೀಡಲಾಗಿರುವ ಮಾಹಿತಿ ಎಂದರೆ ಆರ್​ಎ 22.121. ಡಿಕ್ಲನೇಷನ್​- 10.14 ಸ್ಥಳ ಎಂದು ತೋರಿಸಲಾಗಿದೆ. ಇದನ್ನು ಸುಶಾಂತ್​ ಸಿಂಗ್​ ರಜಪೂತ್​ ಹೆಸರಲ್ಲಿ ನೋಂದಾಯಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಖಗೋಳಾಸಕ್ತರಿಗೆ ತಾವು ಕಂಡು ಹಿಡಿದ ಆಕಾಶಕಾಯಗಳಿಗೆ ಹೆಸರು ನೀಡುವ ಅವಕಾಶ ನೀಡಲಾಗುತ್ತದೆ. ಈ ಹಿಮದಯೇ ಹಲವು ಭಾರತೀಯರ ಹೆಸರನ್ನು ನಕ್ಷತ್ರ ಹಾಗೂ ಇತರ ಆಕಾಶ ಕಾಯಗಳಿಗೆ ಇಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net