

ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಬಾಲಿವುಡ್ನ ಸಾಕಷ್ಟು ಸಿನಿಮಾಗಳು ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿವೆ. ಈಗಾಗಲೇ ಅಮಿತಾಬ್ ಬಚ್ಚನ್, ಆಯುಷ್ಮಾನ್ ಖುರಾನಾ, ಸೇರಿ ಹಲವರು ಸಿನಿಮಾಗಳು ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗಿವೆ. ಜುಲೈನಲ್ಲೂ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಲು ಸಿದ್ಧತೆ ನಡೆಸಿವೆ. ಇದೀಗ ಆ ಓಟಿಟಿಗೆ ಸಂಜಯ್ ದತ್ ಸಹ ಆಗಮಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಫ್ಯಾಮಿಲಿ ಮಾತು ಹೊಸ ಚಿತ್ರದ ಬಗ್ಗೆ ಅಮೃತ ಮಂಥನ
ಹೌದು, ಮಹೇಶ್ ಭಟ್ ನಿರ್ದೇಶನದಲ್ಲಿ ಸಿದ್ಧವಾಗಿರುವ ‘ಸಡಕ್ 2’ ಸಿನಿಮಾ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಜುಲೈ 10ರಂದು ವರ್ಲ್ಡ್ ವೈಡ್ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳು ಲಾಕ್ ಆಗಿರುವುದರಿಂದ ಓಟಿಟಿ ಮೊರೆ ಹೋಗಿದ್ದಾರೆ ನಿರ್ದೇಶಕರು. ಸಂಜಯ್ ದತ್, ಆದಿತ್ಯಾ ರಾಯ್ ಕಪೂರ್, ಆಲಿಯಾ ಭಟ್ ಮುಖ್ಯಭೂಮಿಕೆ ನಿಭಾಯಿಸಿರುವ ಈ ಚಿತ್ರಕ್ಕೆ ವಿಶೇಷ್ ಫಿಲಂಸ್ ಮತ್ತು ಫಾಕ್ಸ್ ಸ್ಟಾರ್ ಜಂಟಿಯಾಗಿ ನಿರ್ಮಾಣ ಮಾಡಿವೆ.
ಇದನ್ನೂ ಓದಿ: ಕಂಬ್ಯಾಕ್ ಕಾತರದಲ್ಲಿ ಮಾನ್ಯಾ
ಇನ್ನು ಇದರ ಬೆನ್ನಲ್ಲೇ ಇನ್ನೂ ಸಾಕಷ್ಟು ಸಿನಿಮಾಗಳು, ವೆಬ್ಸಿರೀಸ್ಗಳು ಓಟಿಟಿಗೆ ಬರಲು ತುದಿಗಾಲಲ್ಲಿ ನಿಂತಿವೆ. ಅವುಗಳಲ್ಲಿ, ದಿಲ್ ಬೇಚಾರಾ, ಬ್ರೀಥ್, ಶಕುಂತಲಾ ದೇವಿ, ದಿಲ್ಲಿ, ದಿ ಫ್ಯಾಮಿಲಿ ಮ್ಯಾನ್, ಗುಂಜನ್ ಸಕ್ಸೆನಾ, ರಸ್ಬರಿ, ದಿ ಲಾಸ್ಟ್ ಹವರ್, ಮುಂಬೈ ಸೀರಿಸ್, ಗೋರ್ಮಿಂಟ್, ಪಾಯಿಸನ್ 2 ಜುಲೈನಲ್ಲಿ ಬಿಡುಗಡೆ ಆಗಲಿವೆ. (ಏಜೆನ್ಸೀಸ್)