ನಾನು ಬಚ್ಚಿಟ್ಟುಕೊಳ್ಳೋಕೆ ದಾವೂದ್​ ಅಥವಾ ಲಾಡೆನ್​​ ಅಲ್ಲ ...

Sanjana Galrani - Final
Published on

ನಟಿ ರಾಗಿಣಿ ಅವರ ಆಪ್ತ ರವಿಶಂಕರ್​ ಅವರನ್ನು ಸಿಸಿಬಿ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದ ನಂತರ, ಈಗ ಮತ್ತೊಬ್ಬ ನಟಿ ಸಂಜನಾ ಗಲ್ರಾನಿ ಅವರ ಆಪ್ತ ರಾಹುಲ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡ್ರಗ್ಸ್​ ವಿಚಾರದಲ್ಲಿ ಸಿಸಿಬಿ ಪೊಲೀಸರು ಇದೀಗ ತೀವ್ರ ತನಿಖೆ ನಡೆಸುತ್ತಿದ್ದು, ಈ ಸಂಬಂಧ ಕನ್ನಡ ಚಿತ್ರರಂಗದ ಇಬ್ಬರು ಜನಪ್ರಿಯ ನಟಿಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತಮ್ಮ ಆಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ, ನಟಿ ಸಂಜನಾ ಅವರು ನಾಪತ್ತೆಯಾಗಿದ್ದಾರೆ ಮತ್ತು ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಸುದ್ದಿಯೊಂದು ಕೇಳಿ ಬಂದಿತ್ತು. ಆದರೆ, ಸಂಜನಾ ಮಾತ್ರ ತಾನು ಎಲ್ಲೂ ಹೋಗಿಲ್ಲ ಮತ್ತು ಈ ಬಗ್ಗೆ ಈಗ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ನನಗೆ ಯಾವ ನೋಟೀಸ್​ ಬಂದಿಲ್ಲ. ನಾನು ಮನೆಯಲ್ಲೇ ಇದ್ದೀನಿ. ನಾನು ದಾವೂದ್​ ಇಬ್ರಾಹಿಮ್ಮಾ ಅಥವಾ ಒಸಮಾ ಬಿನ್ ಲಾಡೆನ್ನಾ ಬಚ್ಚಿಟ್ಟುಕೊಳ್ಳೋಕೆ? ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net