ಇವತ್ತು ಟಾಕ್ಸಿಕ್ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಆರ್ಜಿವಿ, ಕೆ.ಜಿ.ಎಫ್ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಪ್ರಶಾಂತ್ ನೀಲ್ ಮತ್ತು ಯಶ್ ಕುರಿತು ಮೆಚ್ಚುಗೆ ನುಡಿದ್ದಿದ್ದರು. ಕೆ.ಜಿ.ಎಫ್ ತೆರೆಕಾಣುವ ಮೂಲಕ ಈಡೀ ಬಾಲಿವುಡ್ ಬುಡಮೇಲಾಗಿ ಹೋಗಿದೆ ಎಂದು ಅವರು ನೀಡಿದ್ದ ಹೇಳಿಕೆ ಎಲ್ಲಾ ಕಡೆ ವೈರಲ್ ಆಗಿತ್ತು. ಆದರೆ ಈಗ ಹೊಸದಾಗಿ ತೆರೆಕಂಡಿರುವ ಟಾಕ್ಸಿಕ್ ಸಿನಿಮಾವನ್ನು ನೋಡುವ ಬದಲು ಮತ್ತೊಮ್ಮೆ ಧುರಂಧರ್ ಅನ್ನೇ ನೋಡುತ್ತೇನೆ ಎಂಬ ಅವರ ಹೇಳಿಕೆ ಎಲ್ಲಾ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ, (ಏಜನ್ಸೀಸ್).