ಈರುಳ್ಳಿ, ಸಕ್ಕರೆ ಬಳಿಕ ಮೊಟ್ಟೆ ಬೆಲೆ ಏರಿಕೆ? 20 ರಿಂದ 25 ರೂ. ಹೆಚ್ಚಳ ಸಾಧ್ಯತೆ; ಇ-20 ಗೂ ಮೊಟ್ಟೆ ಬೆಲೆಗೂ ಏನೀ ಸಂಬಂಧ? Egg Price Hike

ಈರುಳ್ಳಿ, ಸಕ್ಕರೆ ಬೆಲೆ ಏರಿಕೆ ಬೆನ್ನಲ್ಲೇ ಈಗ ಮೊಟ್ಟೆ ಬೆಲೆ ಕೂಡ ಗಗನಕ್ಕೆ!
ಈರುಳ್ಳಿ, ಸಕ್ಕರೆ ಬೆಲೆ ಏರಿಕೆ ಬೆನ್ನಲ್ಲೇ ಈಗ ಮೊಟ್ಟೆ ಬೆಲೆ ಕೂಡ ಗಗನಕ್ಕೆ!
Published on

ಪ್ರಮುಖ ಮುಖ್ಯಾಂಶಗಳು

  • ಈರುಳ್ಳಿ, ಸಕ್ಕರೆ ಬೆಲೆ ಏರಿಕೆ ಬೆನ್ನಲ್ಲೇ ಈಗ ಮೊಟ್ಟೆ ಬೆಲೆ ಕೂಡ ಗಗನಕ್ಕೆ!
  • ಮೊಟ್ಟೆ ದರ 20ರಿಂದ 25 ರೂ. ಹೆಚ್ಚಳ ಸಾಧ್ಯತೆ
  • ಮೊಟ್ಟೆ ಬೆಲೆ ಏರಿಕೆಗೂ ಇ-20 ಇಂಧನಕ್ಕೂ ಏನೀ ಸಂಬಂಧ?
ನವದೆಹಲಿ: ದೇಶದಲ್ಲಿ ಈರುಳ್ಳಿ, ಸಕ್ಕರೆ, ಸಿರಿಧಾನ್ಯಗಳ ನಂತರ ಈಗ ಮೊಟ್ಟೆಗಳ ಬೆಲೆ (Egg Price Hike) ಕೂಡ ಗಣನೀಯವಾಗಿ ಏರಿಕೆ ಕಾಣಲಿದೆ ಎಂಬ ಶಾಕಿಂಗ್​ ಸುದ್ದಿ ಹೊರಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೊಟ್ಟೆ ಬೆಲೆ ಈಗಾಗಲೇ ಶೇ. 35-40 ರಷ್ಟು ಏರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಈ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂದು ತಿಳಿದು ಬಂದಿದೆ. 
ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (NECC) ಅಂಕಿ-ಅಂಶಗಳ ಪ್ರಕಾರ, ಈಗ ಒಂದು ಫಾರ್ಮ್​ ಮೊಟ್ಟೆ ಬೆಲೆ 7 ರೂಪಾಯಿ ಇದೆ. ಇದನ್ನು ಮಾರುಕಟ್ಟೆಯಲ್ಲಿ  8 ರಿಂ 9 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಈಗ ಬೆಲೆ ಏರಿಕೆ ಎಷ್ಟರ ಮಟ್ಟೆಗೆ ಆಗಲಿದೆ ಎಂದರೆ ಒಂದು ಮೊಟ್ಟೆ ಬೆಲೆ 20 ರ ಗಡಿ ದಾಟಲಿದೆ ಎಂದು ಹೇಳಲಾಗುತ್ತಿದೆ. 

ಎಲ್ಲಾ ಮೊಟ್ಟೆ ಬೆಲೆ ಏರಿಕೆ?

ಆದರೆ, ಜನರು ಅನಗತ್ಯ ಆತಂಕಕ್ಕೆ ಬೀಳುವ ಅಗತ್ಯವಿಲ್ಲ. ಏಕೆಂದರೆ ಏರಿಕೆಯಾಗಲಿರುವ ಮೊಟ್ಟೆ ಕೇವಲ ಕೆಲವೇ ಕೆಲವು ಉನ್ನತ ದರ್ಜೆಯ ದೊಡ್ಡ ಬ್ರಾಂಡ್​ಗಳ ಮೊಟ್ಟೆಗಳು ಮಾತ್ರ ಏರಿಕೆ ಕಾಣಲಿದ್ದು, ದಿನನಿತ್ಯ ಬಳಕೆ ಮಾಡುವ ಮೊಟ್ಟೆಗಳ ಬೆಲೆ ಏರಿಕೆ ಕಂಡರೂ ಕೂಡ ಅಷ್ಟೇನು ಗಾಬರಿ ಪಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಕೆಲ ಉನ್ನತ ದರ್ಜೆಯ ಮೊಟ್ಟೆ ಬೆಲೆ 20 ರಿಂದ 25 ಕ್ಕೆ ಏರಿಕೆ ಕಾಣಲಿದ್ದು, ಈ ಮೊಟ್ಟೆಗಳನ್ನು ದಿನನಿತ್ಯ ಸೇವಿಸುತ್ತಿದ್ದ ಜನರ ಜೇಬಿಗೆ ಕತ್ತರಿ ಬೀಳುವುದು ಖಾತರಿಯಾಗಿದೆ. ಸಾಮಾನ್ಯ ಮೊಟ್ಟೆಗಳ ಬೆಲೆಯಲ್ಲಿ ಇಷ್ಟು ಗಣನೀಯ ಮಟ್ಟದ ಏರಿಕೆ ಕಾಣದಿದ್ದರೂ ಒಂದೆರಡು ರೂಪಾಯಿಗಳ ಏರಿಕೆ ಕಾಣಸಿಗಬಹುದು ಎನ್ನವುದು ಆರ್ಥಿಕ ತಜ್ಞರ ಲೆಕ್ಕಾಚಾರವಾಗಿದೆ.


ಬೆಲೆ ಏರಿಕೆಗೆ ಕಾರಣವೇನು?

ಆದರೆ, ಮೊಟ್ಟೆಗಳ ಬೆಲೆ ಏಕೆ ಏರಿಕೆ ಕಾಣಲಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಈ ಕೋಳಿ ಫಾರ್ಮ್​ ಅಥವಾ ಯಾವುದೇ ಪಕ್ಷಿಗಳ ಫಾರ್ಮ್​ ನಡೆಸಬೇಕಾದರೆ ಅಲ್ಲಿ ಆ ಪಕ್ಷಿಗಳಿಗೆ ಸರಿಯಾದ ಆಹಾರ ನೀಡುವುದು ಅಗತ್ಯವಾಗಿರುತ್ತದೆ. 
ಹಾಗೂ ಈ ಮೊಟ್ಟೆ ಫಾರ್ಮ್​ಗಳಲ್ಲಿ ಪಕ್ಷಿಗಳಿಕೆ ಅಧಿಕವಾಗಿ ಮೆಕ್ಕೆಜೋಳವನ್ನು ಪ್ರಮುಖ ಆಹಾರವನ್ನಾಗಿ ನೀಡಲಾಗುತ್ತದೆ. ಸುಮಾರು ಶೇ. 60 ರಿಂದ 70 ರಷ್ಟು ಫಾರ್ಮ್​ಗಳಲ್ಲಿ ಮೆಕ್ಕೆಜೋಳವೇ ಬಹುಮುಖ್ಯ ಆಹಾರ ಮೂಲವಾಗಿದೆ.
ಆದರೆ ಭಾರತದಲ್ಲಿ ಇ-20 ಇಂಧನ ನೀತಿಯಿಂದಾಗಿ ಈ ಮೆಕ್ಕೆಜೋಳವನ್ನು ಇಥೆನಾಲ್​ ತಯಾರಿಕೆಗೆ ಸಾಗಣೆ ಮಾಡುತ್ತಿರುವ ಹಿನ್ನಲೆ ಫಾರ್ಮ್​ಗಳಲ್ಲಿನ ಪಕ್ಷಿಗಳಿಗೆ ಆಹಾರದ ಕೊರತೆ ಉಂಟಾಗಲಿದ್ದು, ಇದರಿಂದ ಮೊಟ್ಟೆ ಉತ್ಪಾದನೆ ಕಡಿಮೆ ಆಗುವ ಆತಂಕವಿರುವ ಕಾರಣ ಮೊಟ್ಟೆಗಳ ಬೆಲೆ ಏರಿಕೆ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. 
ಒಂದು ವೇಳೆ ಮೆಕ್ಕೆಜೋಳದ ಬದಲು ಸೋಯಾಬೀನ್​ ಅನ್ನು ಆಹಾರ ಉತ್ಪನ್ನವಾಗಿ ಫಾರ್ಮ್​ಗಳು ಬಳಸಲು ಮುಂದಾದರೆ ಸೋಯಾಬೀನ್​ ಕೂಡ ದುಬಾರಿ ಪದಾರ್ಥವಾಗಿರುವ ಹಿನ್ನಲೆ ಮೊಟ್ಟೆ ಬೆಲೆ ಏನು ಮಾಡಿದರೂ ಹೆಚ್ಚಳವಾಗುವುದು ಖಾತರಿಯಾದಂತಾಗಿದೆ. ಇನ್ನೂ ಚಳಿಗಾಲದಲ್ಲಿ ಮೊಟ್ಟೆ ಬೇಡಿಕೆ ಹೆಚ್ಚಾಗಲಿದ್ದು, ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮತ್ತು ದಾಸ್ತಾನು ಸಾಧ್ಯವಾಗದ ಪಕ್ಷದಲ್ಲಿ ಕೂಡ ಬೆಲೆ ಏರಿಕೆ ನಿಶ್ಚಿತ ಎನ್ನಲಾಗುತ್ತಿದೆ, (ಏಜನ್ಸೀಸ್​).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net