'ಟಾಕ್ಸಿಕ್‌' ಅಬ್ಬರಕ್ಕೆ ಬೆಚ್ಚಿಬಿದ್ದ ಬಾಕ್ಸ್ ಆಫೀಸ್! ಮೊದಲ ದಿನವೇ 140 ಕೋಟಿ ಕಲೆಕ್ಷನ್; ಜವಾನ್-ಧುರಂಧರ್ ದಾಖಲೆ ಧೂಳೀಪಟ! Toxic First Day Collection

ಟಾಕ್ಸಿಕ್​ ಮೊದಲ ದಿನದ ಕಲೆಕ್ಷನ್​
ಟಾಕ್ಸಿಕ್​ ಮೊದಲ ದಿನದ ಕಲೆಕ್ಷನ್​
Published on

ಪ್ರಮುಖ ಮುಖ್ಯಾಂಶಗಳು

  • "ಯಶ್ ಅಭಿನಯದ 'ಟಾಕ್ಸಿಕ್'
  • ಮೊದಲ ದಿನವೇ ₹140 ಕೋಟಿ ಗಳಿಕೆ
  • ಜವಾನ್​​ ಮತ್ತು ಧುರಂಧರ್ ದಾಖಲೆಗಳು ಧೂಳೀಪಟ
ಸಿನಿಮಾ: ಗೀತು ಮೋಹನ್​ ದಾಸ್​ ನಿರ್ದೇಶನದ ಹಾಗೂ ರಾಕಿಂಗ್​ ಸ್ಟಾರ್​ ಯಶ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ, ಬಹು ನೀರಿಕ್ಷಿತ ಸಿನಿಮಾ ಟಾಕ್ಸಿಕ್​: ದಿ ಫೇರಿ ಟೇಲ್​ ಫಾರ್​ ಗ್ರೋನಫ್ಸ್​​ ಈಗಾಗಲೇ ತೆರೆಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. 

ಸಿನಿಮಾ ತಂಡ ತಿಳಿಸಿದಂತೆ ಬುಧವಾರ ಆಗಸ್ಟ್ 26 ರಂದು ಪ್ರಪಂಚಾದಾದ್ಯಂತ ಬಿಡುಗಡೆಯಾಗಿದ್ದು, ಕೆಲ ದೇಶಗಳ ಕೆಲ ಥಿಯೇಟರ್​ಗಳಲ್ಲಿ ಮಧ್ಯರಾತ್ರಿ 2.00 ಕ್ಕೆ ಸಿನಿಮಾ ​​ಪ್ರದರ್ಶನ ಕಂಡಿದೆ ಎಂದು ತಿಳಿದು ಬಂದಿದೆ. 

ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳು ಬರುತ್ತಿದ್ದರೂ ಟಾಕ್ಸಿಕ್​ ಮೊದಲೇ ದಿನ (Toxic First Day Collection) ವೇ ನೂರು ಕೋಟಿ ಗಳಿಕೆ ಮಾಡುವ ಮೂಲಕ ಶುಭಾರಂಭ ಮಾಡಿದೆ ಎಂದು ಹೇಳಬಹುದಾಗಿದೆ. 

ಮಾಹಿತಿ ಪ್ರಕಾರ, ಟಾಕ್ಸಿಕ್​ ಮೊದಲ ದಿನ ಪ್ರಪಂಚದಾದ್ಯಂತ ಸುಮಾರು 140 ಕೋಟಿ ಗಳಿಕೆ ಮಾಡುವ ಮೂಲಕ ಜವಾನ್​ ಮತ್ತು ಧುರಂಧರ್ ಸಿನಿಮಾದ ಮೊದಲ ದಿನದ ಗಳಿಕೆ ದಾಖಲೆಗಳನ್ನು ಪುಡಿಗಟ್ಟಿದೆ. 

ಭಾರತದಲ್ಲಿ ಈ ಸಿನಿಮಾದ ಸುಮಾರು 120 ಕೋಟಿ ಗ್ರಾಸ್​ ಕಲೆಕ್ಷನ್​ ಮಾಡಿದರೆ, ವಿದೇಶದಲ್ಲಿ ಸುಮಾರು 20 ಕೋಟಿಗೂ ಹೆಚ್ಚಿನ ಗಳಿಕೆಮಾಡಿದೆ. ಹೀಗಾಗಿ ಟಾಕ್ಸಿಕ್​ ಮೊದಲ ದಿನದ ಗಳಿಕೆ 140 ಕೋಟಿ ಎಂದು ಹೇಳಬಹುದಾಗಿದೆ. ಇನ್ನು ವಾರಾಂತ್ಯದಲ್ಲಿ ಈ ಗಳಿಕೆ ಪ್ರಮಾಣ ಅಧಿಕವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದ್ದರೂ ಸಿನಿಮಾ ಬಗ್ಗೆ ಕೆಲ ನೆಗೆಟಿವ್​ ರಿವ್ಯೂ ಹೊರಬರುತ್ತಿರುವ ಹಿನ್ನಲೆ ಹೈಪ್​ಗೆ ತಕ್ಕ ಗಳಿಕೆ ಕಷ್ಟಸಾಧ್ಯ ಎಂದು ಸಿನಿ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. 

ಎಲ್ಲೆಲ್ಲಿ ಎಷ್ಟೆಷ್ಟು ಗಳಿಕೆ?


ಕನ್ನಡ, ಹಿಂದಿ ಸೇರಿದಂತೆ ಸುಮಾರು ಆರು ಭಾಷೆಗಳಲ್ಲಿ ತೆರೆಕಂಡಿದ್ದ ಟಾಕ್ಸಿಕ್​ ಕರ್ನಾಟಕದಲ್ಲಿ ಸುಮಾರು 30 ಕೋಟಿ ಕಲೆಕ್ಷನ್​ ಮಾಡಿದ್ದರೆ, ಆಂಧ್ರ ಮತ್ತು ತೆಲಂಗಾಣದಲ್ಲಿ 18 ಕೋಟಿ, ತಮಿಳುನಾಡು 6 ಕೋಟಿ, ಕೇರಳದಲ್ಲಿ 2.2 ಕೋಟಿ ಹಾಗೂ ಹಿಂದಿ ಬೆಲ್ಟ್​​ನಲ್ಲಿ 62.75 ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. 

ಸೌತ್​ ಸಿನಿಮಾಗಳನ್ನು ಹಿಂದಿಕ್ಕಿದ ಟಾಕ್ಸಿಕ್​!

ಇನ್ನೂ ಮೊದಲ ದಿನಗ ಕಲೆಕ್ಷನ್​ಗೆ ಬಂದರೆ ಕಲ್ಕಿ, ಸಲಾರ್​, ಆದಿಪುರುಷ್​, ದೆವರಾ, ಜವಾನ್​ ಮತ್ತು ಧುರಂಧರ್ ಸಿನಿಮಾಗಳ ಮೊದಲ ದಿನದ ಗಳಿಕೆಗಿಂತ ಹೆಚ್ಚಿನ ಕಲೆಕ್ಷನ್​ ಟಾಕ್ಸಿಕ್​ ಮಾಡಿದೆ. 

ಆದರೆ, ಅತ್ಯಧಿಕ ಮೊದಲ ದಿನಗ ಗಳಿಕೆ ಮಾಡಿರುವ ಪಟ್ಟಿಯಲ್ಲಿ 164 ಕೋಟಿ ಮೂಲಕ ಪುಷ್ಪಾ 2 ಸಿನಿಮಾ ಮೊದಲ ಸ್ಥಾನದಲ್ಲಿದರೆ, 133 ಕೋಟಿ ಗಳಿಸಿದ್ದ ಆರ್​ಆರ್​ಆರ್​ ಎರಡನೇ ಸ್ಥಾನದಲ್ಲಿದೆ ಹಾಗೂ 121 ಕೋಟಿ ಮೂಲಕ ಬಾಹುಬಲಿ ಸಿನಿಮಾ ಮೂರನೇ ಸ್ಥಾನದಲ್ಲಿದೆ. ಇದೇ ಯಶ್​ ಅಭಿನಯದ ಕೆಜಿಎಫ್​-2 ಸಿನಿಮಾ 116 ಕೋಟಿಯೊಂದಿದೆ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ, (ಏಜನ್ಸೀಸ್​). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net