ವಿದ್ಯುತ್ ಕೇಬಲ್ಗೆ ತಗುಲಿ ಆಕಾಶದಲ್ಲೇ ಸ್ಪೋಟಗೊಂಡ ಗೈರೋಕಾಪ್ಟರ್: ಇಬ್ಬರ ದಾರುಣ ಸಾವು; ವಿಡಿಯೋ ವೈರಲ್! Gyrocopter Blast
ಬೆಂಕಿ ಚೆಂಡಿನಂತೆ ಉರಿದ ಗೈರೋಕಾಪ್ಟರ್!
Published on:
Copied
Follow Us
ಇಟಲಿ: ಗುರುವಾರ (ಆ.27) ಇಟಲಿಯ ಪೀಡ್‌ಮಾಂಟ್ ಪ್ರದೇಶದಲ್ಲಿರುವ ಕ್ಯಾಂಪ್ಲಿಸಿಯೋಲಿ ಡ್ಯಾಂಮ್ ಬಳಿ ಸಣ್ಣ ಗಾತ್ರದ ಗೈರೋಕಾಪ್ಟರ್ (Gyrocopter Blast) ವಿದ್ಯುತ್ ಕೇಬಲ್ವೊಂದಕ್ಕೆ ತಾಕಿದ ಪರಿಣಾಮ ಆಕಾಶದಲ್ಲೇ ಸ್ಪೋಟಗೊಂಡ ಘಟನೆ ವರದಿಯಾಗಿದೆ.
ಈ ದುರ್ಘಟನೆಯಲ್ಲಿ ಗೈರೋಕಾಪ್ಟರ್ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು, ಇದು ಕಾರ್ ಸವೀರ್ಸ್ಗಾಗಿ ಹಾಸಿದ್ದ ಕೇಬಲ್ ಎಂದು ತಿಳಿದು ಬಂದಿದ್ದು, ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾನದಲ್ಲಿ ಈ ದುರಂತರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಘಟನೆ ಆಂಟ್ರೊನಾ ಸ್ಕಿರಾಂಕೊದಲ್ಲಿ ಕ್ಯಾಂಪ್ಲಿಸಿಯೊಲಿ ಸರೋವರದ ಮೇಲೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಮಾಹಿತಿ ಪ್ರಕಾರ, ಈ ಗೈರೋಕಾಪ್ಟರ್ನಲ್ಲಿ ಕೇವಲ ಇಬ್ಬರು ಮಾತ್ರ ಪಯಣಿಸಬಹುದಾಗಿದ್ದು, ಗೈರೋಕಾಪ್ಟರ್ ಕೇಬಲ್ ವೈರ್ಗೆ ತಗುಲಿ ಕೆಲವೇ ಕ್ಷಣಗಳಲ್ಲಿ ಬೆಂಕಿಯುಂಡೆಯಂತೆ ಉರಿದಿರುವ ದೃಶ್ಯ ಜನರ ನಿದ್ದೆಗೆಡಿಸಿದೆ ಎಂದರೆ ಸುಳ್ಳಲ್ಲ.
ಈ ಘಟನೆ ವರದಿಯಾಗುತ್ತಿದ್ದಂತೆ ಇಟಲಿ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದು, ಕೇಬಲ್ ವೈರ್ ಕೆಳಗೆ ಇಳಿ ಬಿದ್ದಿತ್ತೆ? ಗೈರೋಕಾಪ್ಟರ್ ಚಾಲಕರ ನಿಯಂತ್ರಣ ತಪ್ಪಿತ್ತೆ? ಅಥವಾ ತಾಂತ್ರಿಕ ದೋಷವೇನಾದರೂ ಕಂಡುಬಂದಿತ್ತೆ ಎನ್ನುವುದು ತನಿಖೆ ನಡೆದು, ವರದಿ ಸಲ್ಲಿಕೆಯಾದ ಬಳಿಕವೇ ತಿಳಿದು ಬರಬೇಕಿದೆ, (ಏಜನ್ಸೀಸ್).