ಕೆಣಕಿದ ದೇವಗನ್​, ಸಿಡಿದೆದ್ದ ಸ್ಯಾಂಡಲ್​ವುಡ್​; ಕಣಕಣದಲ್ಲೂ ಕನ್ನಡ ಎಂದ ಕನ್ನಡಿಗರು...

Sudeep Ajay
Published on

ಬೆಂಗಳೂರು: ಹಿಂದಿ ರಾಷ್ಟ್ರಭಾಷೆ ಎಂದು ಸುಳ್ಳು ಹೇಳಿದ್ದಲ್ಲದೆ, 'ಕನ್ನಡ ಚಿತ್ರವನ್ನು ಏಕೆ ಹಿಂದಿಗೆ ಡಬ್​ ಮಾಡುತ್ತೀರಿ?' ಎಂದು ಪ್ರಶ್ನಿಸಿ ಕನ್ನಡ ಚಿತ್ರರಂಗವನ್ನು ಕೆಣಕಿದ ಬಾಲಿವುಡ್​ ನಟ ಅಜಯ್​ ದೇವಗನ್​ಗೆ ಸುದೀಪ್​ ತಕ್ಕ ಉತ್ತರ ನೀಡಿದ ಬೆನ್ನಿಗೇ ಸ್ಯಾಂಡಲ್​ವುಡ್​ ದೇವಗನ್ ಹೇಳಿಕೆ ವಿರುದ್ಧ ಸಿಡಿದೆದ್ದಿದೆ.

ಅಜಯ್​ ವಿರುದ್ಧ ಕನ್ನಡ ಚಿತ್ರರಂಗದ ಖ್ಯಾತನಾಮರು ಟ್ವಿಟರ್​ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಕೆಲವು ರಾಜಕಾರಣಿಗಳೂ ಅದಕ್ಕೆ ದನಿಗೂಡಿಸಿದ್ದಾರೆ. ಮಾತ್ರವಲ್ಲ, ಕನ್ನಡಿಗರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ, ದೇವಗನ್​ ಹೇಳಿಕೆಯನ್ನು ವಿರೋಧಿಸಿದ್ದಲ್ಲದೆ 'ಕಣಕಣದಲ್ಲೂ ಕನ್ನಡ' ಎಂದು ಗಟ್ಟಿಯಾಗಿ ಹೇಳಿದ್ದಾರೆ.

ಅಂಥ ಕೆಲವು ದಿಟ್ಟ ಉತ್ತರಗಳು ಇಲ್ಲಿವೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net