

ಹೈದರಾಬಾದ್: ಮಲಯಾಳಂ ನಟಿ ಸಂಯುಕ್ತಾ ಮೆನನ್ ( Samyuktha Menon ), ಸದ್ಯ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳಲ್ಲೂ ಮಿಂಚುತ್ತಿದ್ದಾರೆ. ಮಾಲಿವುಡ್ನಲ್ಲಿ 10ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಈಗಾಗಲೇ ಕೆಲವು ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ “ಗಾಳಿಪಟ 2" ಚಿತ್ರದ ಮೂಲಕ ಕನ್ನಡಕ್ಕೂ ಪದಾರ್ಪಣೆ ಮಾಡಿದ ಅವರು, ದಿಗಂತ್ಗೆ ಜೋಡಿಯಾಗಿದ್ದರು.
2022ರಲ್ಲಿ ಪವನ್ ಕಲ್ಯಾಣ್ ಅಭಿನಯದ “ಭೀಮ್ಲಾ ನಾಯಕ್’ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟ ಅವರು, ಬಳಿಕ “ಬಿಂಬಿಸಾರ’ ಚಿತ್ರದಲ್ಲಿ ನಟಿಸಿದ್ದರು. ಏಪ್ರಿಲ್ನಲ್ಲಿ ಬಿಡುಗಡೆಯಾದ “ವಿರೂಪಾಕ್ಷ’ ಚಿತ್ರದ ಸಕ್ಸಸ್ ಬಳಿಕ ಸಂಯುಕ್ತಾಗೆ ಟಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿದೆ. ಈಗಾಗಲೇ ನಂದಮೂರಿ ಕಲ್ಯಾಣ್ ನಾಯಕನಾಗಿರುವ “ಡೆವಿಲ್’ ಚಿತ್ರಕ್ಕೆ ಅವರು ಆಯ್ಕೆಯಾಗಿದ್ದು, ಅದರ ಬೆನ್ನಲ್ಲೇ “ಕಾರ್ತಿಕೇಯ’, “ಸ್ಪೈ’ ಖ್ಯಾತಿಯ ನಟ ನಿಖಿಲ್ ಸಿದ್ಧಾರ್ಥ್ ನಟಿಸುತ್ತಿರುವ “ಸ್ವಯಂಭೂ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ತಾಜಾ ಸಂಗತಿ ಏನೆಂದರೆ, ಸಾಮಾಜಿಕ ಜಾಲತಾಣದಲ್ಲೂ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಸಂಯುಕ್ತಾ ಮೆನನ್, ಇತ್ತೀಚೆಗೆ ಹಂಚಿಕೊಂಡಿರುವ ಗ್ಲಾಮರಸ್ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಪ್ಪು ಬಣ್ಣದ ಡ್ರೆಸ್ನಲ್ಲಿ ಸಂಯುಕ್ತಾ ತುಂಬಾ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಫೋಟೋಗಳು ವೈರಲ್ ಆಗಿದ್ದು, ಸಂಯುಕ್ತಾ ಮೈಮಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಫೋಟೋಗೆ ಲೈಕ್ಗಳ ಸುರಿಮಳೆಯಾಗುತ್ತಿದೆ.
ಇನ್ನು 'ಗಾಳಿಪಟ 2’ ಸಿನಿಮಾ ಬಿಡುಗಡೆ ವೇಳೆ ಸಂಯುಕ್ತಾ ವಿಜಯವಾಣಿ ಜತೆ ಮಾತನಾಡಿದ್ದರು. ನಮಗೆ ಗೊತ್ತಿಲ್ಲದೆಯೇ ಕೆಲವೊಮ್ಮೆ ಒಳ್ಳೆ ವಿಷಯಗಳು ನಮ್ಮ ಬಳಿಗೆ ಬರುತ್ತವೆ. ನನಗೆ ‘ಗಾಳಿಪಟ 2’ ಅವಕಾಶ ಸಿಕ್ಕಿದ್ದೂ ಹಾಗೆಯೇ. ಬೆಂಗಳೂರಿನಲ್ಲಿ ನನ್ನ ಸಂಬಂಧಿಕರು, ಗೆಳೆಯರು ಇದ್ದಾರೆ. ಇಲ್ಲಿನ ವಾತಾವರಣ ನನಗಿಷ್ಟ. ಆಗಾಗ ಬರುತ್ತಿರುತ್ತೇನೆ. ಅದೇ ರೀತಿ ಮೂರು ದಿನ ಬ್ರೇಕ್ಗಾಗಿ ಇಲ್ಲಿಗೆ ಬಂದೆ. ಆಗ ಯಾವುದೋ ಬೇರೆ ಚಿತ್ರಕ್ಕೆ ಕರೆ ಬಂತು. ಆ ಮೀಟಿಂಗ್ಗೆ ಹೋದಾಗ ಅಲ್ಲಿ ಯೋಗರಾಜ್ ಭಟ್ ಸರ್ ಕೂಡ ಇದ್ದರು. ‘ಗಾಳಿಪಟ 2’ ಅನುಪಮ ಪಾತ್ರ ಆಫರ್ ನೀಡಿ, ‘ಗಾಳಿಪಟ’ ಚಿತ್ರ ನೋಡಲು ತಿಳಿಸಿದರು. ಚಿತ್ರ ನನಗೆ ಇಷ್ಟವಾಯಿತು, ಒಪ್ಪಿಕೊಂಡೆ’ ಎಂದು ಗಾಳಿಪಟ ಸೀಕ್ವಲ್ ಸೇರಿದ ಬಗ್ಗೆ ಹೇಳಿಕೊಳ್ಳುತ್ತಾರೆ ಸಂಯುಕ್ತಾ.
ಅಂದಹಾಗೆ, ಸಂಯುಕ್ತಾ ಕೂಡ ಕನ್ನಡ ಚಿತ್ರಗಳ ಅಭಿಮಾನಿಯಂತೆ, ‘ಕನ್ನಡದಲ್ಲಿ ಉತ್ತಮ ಚಿತ್ರಗಳು ಮೂಡಿಬರುತ್ತಿವೆ. ‘ಕೆಜಿಎಫ್ 2’ ದೊಡ್ಡ ಚಿತ್ರ, ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತು. ಅದಕ್ಕೆ ಹೋಲಿಸಿದರೆ ‘777 ಚಾರ್ಲಿ’ ಚಿಕ್ಕ ಸಿನಿಮಾ. ಆದರೆ, ಅದು ಕೂಡ ಕೆಜಿಎಫ್ ರೀತಿಯಲ್ಲೇ ಸದ್ದು ಮಾಡಿತು. ಈ ಎರಡೂ ಚಿತ್ರಗಳು ನನಗಿಷ್ಟ’ ಎಂದು ಹೇಳಿಕೊಳ್ಳುತ್ತಾರೆ. ಹಾಗೆಯೇ ಪುನೀತ್ ರಾಜ್ಕುಮಾರ್ ಅವರ ‘ಮಿಲನ’ ಅಚ್ಚುಮೆಚ್ಚಿನ ಚಿತ್ರವೆಂದು ಹೇಳುವ ಸಂಯುಕ್ತಾ, ‘ಪುನೀತ್ ಸರ್ ಜತೆ ಪಾರ್ವತಿ ಮೆನನ್ ನಟಿಸಿದ್ದ ‘ಮಿಲನ’ ಮಲಯಾಳಂನಲ್ಲಿ ಡಬ್ ಆಗಿ ಆಗಾಗ ಟಿವಿಯಲ್ಲಿ ಬರುತ್ತಿತ್ತು. ನಾನು ಹಲವು ಬಾರಿ ನೋಡಿದ್ದೇನೆ. ‘ನಿನ್ನಿಂದಲೇ’ ಹಾಡು ಇಷ್ಟ’ ಎಂದಿದ್ದರು.