ಪ್ರೀ ವೆಡ್ಡಿಂಗ್​ ಶೂಟ್​ ವೇಳೆ ನವಜೋಡಿಯ ಲಿಪ್​ಲಾಕ್​! ಇದನ್ನೆಲ್ಲ 4 ಗೋಡೆಯ ಮಧ್ಯೆ ಇಟ್ಟುಕೊಳ್ಳಿ ಅಂದ್ರು ನೆಟ್ಟಿಗರು | Pre Wedding shoot

Pre Wedding shoot
Published on

ನವದೆಹಲಿ: ಮದುವೆಗೂ ಮುನ್ನ ಅಥವಾ ನಂತರ ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್ ( Pre Wedding shoot )​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋ ಮತ್ತು ವಿಡಿಯೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಇನ್ನು ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ. ಆದರೆ, ಇಲ್ಲೊಂದು ಜೋಡಿಯ ಫೋಟೋಶೂಟ್​ ಎಲ್ಲರ ಮೆಚ್ಚುಗೆ ಪಡೆಯುವ ಬದಲು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ರೈತ, ಪೊಲೀಸ್ ಹೀಗೆ ಅನೇಕ ಪರಿಕಲ್ಪನೆಯಲ್ಲಿ ಫೋಟೋಶೂಟ್​ ಮಾಡಿಸುತ್ತಾರೆ. ಈ ಮೂಲಕ ತಾವು ಮಾಡುವ ವೃತ್ತಿಗೆ ಗೌರವ ಸೂಚಿಸುವುದನ್ನು ನಾವು ನೋಡಿದ್ದೇವೆ. ಇನ್ನು ಕೆಲವರು ಸುಂದರವಾದ ತಾಣಗಳಲ್ಲಿ ಮನಮೋಹಕ ದೃಶ್ಯಗಳನ್ನು ಸೆರೆಹಿಡಿಯುತ್ತಾರೆ. ಆದರೆ, ಇಲ್ಲೊಂದು ಜೋಡಿ ಪ್ರೀ ವೆಡ್ಡಿಂಗ್​ ಫೋಟೋಶೂಟ್​​ ವೇಳೆ ಲಿಪ್​ಲಾಕ್​ ಮಾಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿರುವ ನವಜೋಡಿ ಒಬ್ಬರನ್ನೊಬ್ಬರನ್ನು ತಬ್ಬಿಕೊಂಡು ಗಾಢವಾಗಿ ಚುಂಬಿಸುತ್ತಿರುವ ದೃಶ್ಯವನ್ನು ಕಾಣಬಹುದು. ಆದರೆ, ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ವೆಡ್ಡಿಂಗ್ ಶೂಟ್​ ಹೆಸರಿನಲ್ಲಿ ಮದುವೆಯಾಗುವ ಜೋಡಿಗಳು ತಮ್ಮ ಮಿತಿಯನ್ನು ಮೀರುತ್ತಿದ್ದಾರೆ. ಈ ರೀತಿಯ ವರ್ತನೆ ಸರಿಯಲ್ಲ ಎಂದು ಆಕ್ರೊಶ ಹೊರಹಾಕಿದ್ದಾರೆ.​

ನಾಲ್ಕು ಗೋಡೆಗಳ ನಡುವೆ ಇರಬೇಕಾದನ್ನು ಈ ರೀತಿ ಪ್ರದರ್ಶಿಸುವುದು ಸರಿಯಲ್ಲ. ನಮ್ಮದು ಭಾರತೀಯ ಸಂಸ್ಕೃತಿ. ಇಲ್ಲಿ ಮದುವೆಗೆ ಅದರದೇಯಾದ ವಿಶೇಷ ಗೌರವ ಇದೆ. ನೀವುಗಳು ಈ ರೀತಿ ವಿಡಿಯೋ ಮಾಡಿ ಗೌರವವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದೀರಿ. ಇಂಥದ್ದಕ್ಕೆ ಬೆಂಬಲ ನೀಡಿದ ಪಾಲಕರಿಗೂ ನಾಚಿಕೆಯಾಗಬೇಕು ಎಂದು ನೆಟ್ಟಿಗರು ವೈರಲ್​ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net