ಅಂದಹಾಗೆ, ನಟಿ ಸಮಂತಾ ಫಿಟ್ನೆಸ್ ಫ್ರೀಕ್ ಎಂಬುದು ಅವರ ಅಭಿಮಾನಿಗಳಿಗೆ ಗೊತ್ತಿದೆ. ಹೌದು, ನಟಿ ಸಮಂತಾ ರುತ್ ಪ್ರಭು ಅವರ ವೈಯಕ್ತಿಕ ಬದುಕಿನಲ್ಲಿ ವಿಚ್ಛೇದನದ ಬಳಿಕ ಬಿರುಗಾಳಿ ಬೀಸಿದರು ಕೂಡಾ ಸ್ಯಾಮ್ ವೃತ್ತಿ ಬದುಕಿನಲ್ಲಿ, ಲೈಫ್ ಸ್ಟೈಲ್ನಲ್ಲಿ ಮಾತ್ರ ಯಾವುದೇ ಅಥವಾ ಕಿಂಚಿತ್ತು ಬದಲಾವಣೆ ಆಗಿಲ್ಲ. ಸಿನಿಮಾ, ಆಡ್ ಶೂಟ್, ಸಾಮಜಿಕ ಸೇವೆ ಅಂತ ಹೆಚ್ಚೆಚ್ಚು ಬ್ಯುಸಿಯಾಗಿರುವ ನಟಿ ಸಮಂತಾಗೆ ಬಿಡುವು ಸಿಗದಿದ್ದರೂ ಅವರು ಪ್ರತಿ ದಿನ ವರ್ಕ್‌ಔಟ್ ಮಾಡುವುದನ್ನ ಮಾತ್ರ ಮರೆಯುವುದಿಲ್ಲ.