ಆಲಿಯಾ ಭಟ್ ಬಾಯ್​ಫ್ರೆಂಡ್ ಮೇಲೆ ಎಲ್ಲಾ ನಟಿಯರ ಕಣ್ಣು?

Published on
ದಕ್ಷಿಣ ಭಾರದ ಬುಟ್ಟ ಬೊಮ್ಮಾ ನಟಿ ಪೂಜಾ ಹೆಗ್ಡೆ ಅವರಿಗೆ ಭಾರತೀಯ ನಾಲ್ಕು ಭಾಷೆಯ ಚಿತ್ರರಂಗಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಹೌದು, ಬುಟ್ಟ ಬೊಮ್ಮಾಳ ಅಭಿಮಾನಿ ಬಳಗ ಎಷ್ಟು ದೊಡ್ಡದು ಎಂದು ಹೊಸದಾಗಿ ತಿಳಿಸ ಬೇಕಿಲ್ಲ. ಸದ್ಯ, ನಟಿಯ ಪ್ಯಾನ್ ಇಂಡಿಯನ್ ಸಿನಿಮಾ ಆದ ‘ರಾಧೆ ಶ್ಯಾಮ್ ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ನಟ ಪ್ರಭಾಸ್ ಅವರ ಜತೆ ನಟಿ ಪೂಜಾ ಈ ಸಿನಿಮಾದಲ್ಲಿ ತೆರೆಹಂಚಿಕೊಂಡಿದ್ದಾರೆ. ಈ ನಡುವೆ ಪೂಜಾ ಅವರ ಬಗ್ಗೆ ಒಂದು ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅಂದಹಾಗೆ, ಬಾಲಿವುಡ್​ನ ಡಿಂಪಲ್ ಕ್ವೀನ್ ನಟಿ ಆಲಿಯಾ ಭಟ್ ಅವರ ಬಾಯ್​ಫ್ರೆಂಡ್ ನಟ ರಣಬೀರ್ ಕಪೂರ್ ಮೇಲೆ ನಟಿ ಪೂಜಾ ಹೆಗ್ಡೆ ಕಣ್ಣಿಟ್ಟಿದ್ದಾರಂತೆ.
ಆದರೆ, ಅದು ಪ್ರೀತಿಯ ವಿಚಾರವಾಗಿ ಅಲ್ಲ. ಬದಲಿಗೆ ನಟನೆಯ ವಿಚಾರವಾಗಿ ಪೂಜಾ ಅವರು ಈ ಮಾತನ್ನು ವ್ಯಕ್ತಪಡಿಸಿದ್ದಾರೆ. ನಟಿ ಪೂಜಾ ಹೆಗ್ಡೆ ಅವರಿಗೆ ‘ರಾಧೆ ಶ್ಯಾಮ್​’ ಚಿತ್ರದ ಪ್ರಚಾರದ ಒಂದು ಸಂದರ್ಶನದ ವೇಳೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಲಾಗಿದ್ದು, ನೀವು ಯಾರ್ಯಾರ ಜತೆ ನಟಿಸಬೇಕು ಎಂದುಕೊಂಡಿದ್ದೀರಿ ಎಂಬ ಪ್ರಶ್ನೆಯೂ ಕೇಳಲಾಗಿತ್ತು. ಆಗ, ನಟಿ ಪೂಜಾ ಅವರು ಬಾಲಿವುಡ್​ನಲ್ಲಿ ರಣಬೀರ್ ಕಪೂರ್ ಅವರ ಜತೆಗೆ ನಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. ಇನ್ನು, ತಮಿಳಿನಲ್ಲಿ ನಟ ಧನುಷ್ ಅವರ ಜತೆಗೆ ನಟಿಸಬೇಕು ಎಂದು ಹೇಳಿದ್ದಾರೆ ನಟಿ ಪೂಜಾ ಹೆಗ್ಡೆ. ನಟಿಯ ಈ ಉತ್ತರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net