ಹೌದು, 2010 ರ ಫೆಬ್ರವರಿ 26 ರಂದು ನಟಿ ಸಮಂತಾ ಸಿನಿಮಾರಂಗದಲ್ಲಿ ತಮ್ಮ ಪ್ರಯಾಣವನ್ನು ಆರಂಭಿಸಿದರು. ಹಾಗಾಗಿ, ನಟಿ ಸಮಂತಾ ಅವರ ಸಿನಿ ಪಯಣಕ್ಕೆ ಇಂದಿಗೆ 12 ವರ್ಷ ತುಂಬಿದೆ. ಹೀಗಾಗಿ, ಈ ವಿಶೇಷ ದಿನಕ್ಕೆ ಒಂದು ವಿಶೇಷ ಫೋಟೋ ಶೇರ್ ಮಾಡಿದ ನಟಿ ತಮ್ಮ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ. ಇನ್ನು, ನಟಿ ಸಮಂತಾಗೆ ಬೇರೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಸಾವಿರ ಸಾವಿರ ಅಭಿನಂದನೆಗಳ ಕಾಮೆಂಟ್ಗಳು ಹರಿದುಬಂದಿವೆ. 2010 ರ ಫೆಬ್ರವರಿ 26 ರಂದು ‘ಏ ಮಾಯ ಚೇಸಾವೆ’ ರಿಲೀಸ್ ಆಗಿದ್ದು, ಇದು ನಟಿ ಸಮಂತಾ ಅವರ ಮೊದಲ ಸಿನಿಮಾ ಆಗಿದೆ. ಇದೇ ಚಿತ್ರದ ಮೂಲಕ ನಟಿ ತಮ್ಮ ಮಾಜಿ ಪತಿ ನಾಗ ಚೈತನ್ಯಾರನ್ನು ಮೊದಲು ಭೇಟಿಯಾಗಿದ್ದು.