ಮತ್ತೆ ಚಿತ್ರಗಳಲ್ಲಿ ನಟಿಸುವ ಆಸೆ ಬಿಚ್ಚಿಟ್ಟ ನಟಿ ಸ್ಯಾಮ್!

sam
Published on

ಹೈದರಾಬಾದ್​: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ಮಯೋಸೈಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಸದ್ಯ ಈ ಕಾಯಿಲೆಯಿಂದಾಗಿ ಸಮಂತಾ ಚಿತ್ರರಂಗದಿಂದಲೇ ಬ್ರೇಕ್ ತೆಗೆದುಕೊಂಡಿದ್ದಾರೆ. ತಮ್ಮೆಲ್ಲ ಕಮಿಟ್‌ಮೆಂಟ್‌ಗಳನ್ನು ಮುಗಿಸಿಕೊಂಡಿರುವ ಅವರು, ಒಂದು ವರ್ಷ ಯಾವುದೇ ಸಿನಿಮಾ ಒಪ್ಪಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಆರೋಗ್ಯ ಸುಧಾರಣೆಯ ಜೊತೆಗೆ ಗೆಳೆಯರು, ಗೆಳತಿಯರೊಡನೆ ಹಲವು ಕಡೆಗಳಿಗೆ ಪ್ರವಾಸ ಹೋಗಿದ್ದ ನಟಿ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಕ್ರಿಯರಾಗಿದ್ದರು.

ಈಗ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ ಸಮಂತಾ...ಆರೋಗ್ಯಕ್ಕೆ ಸಂಬಂಧಿಸಿದಂತೆ ಪಾಡ್​ಕಾಸ್ಟ್​ ಮೂಲಕ ಮತ್ತೆ ಕೆಲಸಕ್ಕೆ ಮರಳುವುದಾಗಿ ನಟಿ ಸಮಂತಾ ರುತ್​ ಪ್ರಭು ಹೇಳಿದ್ದಾರೆ.

ಕೆತಡಲ್​ ಸಿರೀಸ್​ ಚಿತ್ರೀಕರಣ ಮುಕ್ತಾಯಗೊಳಿಸಿ ಕಳೆದ ಜುಲೈನಲ್ಲಿ ಆರೋಗ್ಯದಡೆಗೆ ಗಮನಹರಿಸಬೇಕೆಂದು ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು. ಇದೀಗ ಏಳು ತಿಂಗಳ ಬಳಿಕ ಮತ್ತೇ ಹೊಸತನದೊಂದಿಗೆ ವಾಪಸ್ಸುಗುವುದಾಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಡ ಅವರು ತಮ್ಮಹೊಸ ಯೋಜನೆಯ ಬಗ್ಗೆ ಹೇಳಿದ್ದಾರೆ.

ನಾನು ಕೊನೆಗೂ ಕೆಲಸಕ್ಕೆ ಹಿಂತಿರುಗುತ್ತಿದ್ದೇನೆ. ಕೆಲವು ತಿಂಗಳಿನಿಂದ ನಾನು ಸಂಪೂರ್ಣವಾಗಿ ಕೆಲಸವಿಲ್ಲದೇ ಇದ್ದೆ. ಆದರೆ ನನ್ನ ಸ್ನೇಹಿತನೊಂದಿಗೆ ಹೊಸದೊಂದು ಕೆಲಸದ ಯೋಜನೆಯಲ್ಲಿದ್ದೆ. ಅದು ಹೆಲ್ತ್​ ಪಾಡ್​ಕಾಸ್ಟ್​. ಇದು ಅನಿರೀಕ್ಷಿತವಾಗಿದೆ. ಆದರೆ ಇದು ನಾನು ನಿಜವಾಗಿಯೂ ಪ್ರೀತಿಸುವ ವಿಷಯ ಮತ್ತು ನಾನು ತುಂಬಾ ಭಾವುಕಳಾಗಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net