More

  ಆಪ್ತ ಸಹಾಯಕನ ಮನೆಗೆ ಯಶ್ ಭೇಟಿ; ಮಗುವನ್ನು ಮುದ್ದಾಡಿ ಚಿನ್ನದ ಸರ ಗಿಫ್ಟ್ ಕೊಟ್ಟ ರಾಕಿ ಭಾಯ್!

  ಬೆಂಗಳೂರು: ಸ್ಯಾಂಡಲ್‌ವುಡ್‌ನ ಲವ್ಲೀ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಯಶ್ ಅವರ ಆಪ್ತ ಸಹಾಯಕನ ಮನೆಗೆ ಭೇಟಿ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ನಟ ಯಶ್ ಸದ್ಯ ‘ಟಾಕ್ಸಿಕ್’ ಸಿನಿಮಾದಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ಶೆಡ್ಯೂಲ್ ನಡುವೆಯೂ ತಮ್ಮ ಆಪ್ತ ಸಹಾಯಕನ ಮನೆಗೆ ಯಶ್ ದಂಪತಿ ಭೇಟಿ ನೀಡಿದ್ದಾರೆ.

  ಇದನ್ನೂ ಓದಿ:ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್​ನವರು ಕಡಿದು ಕಟ್ಟೆ ಹಾಕಿದ್ದು ಏನಿಲ್ಲ: ವಿಜಯೇಂದ್ರ

  ಯಶ್ ತನ್ನ ಸಿಬ್ಬಂದಿಗಳನ್ನು ಎಂದಿಗೂ ಮರೆಯೋದಿಲ್ಲ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಇತ್ತೀಚೆಗೆ ತನ್ನ ಅಂಗರಕ್ಷಕರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು.

  ಆಪ್ತ ಸಹಾಯಕನ ಮನೆಗೆ ಯಶ್ ಭೇಟಿ; ಮಗುವನ್ನು ಮುದ್ದಾಡಿ ಚಿನ್ನದ ಸರ ಗಿಫ್ಟ್ ಕೊಟ್ಟ ರಾಕಿ ಭಾಯ್!

  ಚೇತನ್ ಎಂಬುವವರು ಕಳೆದ ವರ್ಷಗಳಿಂದ ಯಶ್‌ಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಚೇತನ್ ತಂದೆಯಾಗಿದ್ದರು. ಹಾಗಾಗಿ ಶುಭಕೋರಲು ಸಹಾಯಕನ ಮನೆಗೆ ಯಶ್ ದಂಪತಿ ಎಂಟ್ರಿ ಕೊಟ್ಟಿದ್ದಾರೆ. ಚೇತನ್​ ಮಗುವನ್ನು ಎತ್ತಿಕೊಂಡು ಆರ್ಶೀವಾದ ಮಾಡಿದ್ದಾರೆ.
  ಆಪ್ತ ಸಹಾಯಕ ಚೇತನ್ ಮಗು ನೋಡಲು ಚೇತನ್ ಮನೆಗೆ ಹೋದ ಯಶ್ ಹಾಗೂ ರಾಧಿಕಾ ಪಂಡಿತ್ ಆಗಮಿಸಿದ್ರು. ಮಗುವನ್ನು ನಟ ಯಶ್ ತೊಡೆಯ ಮೇಲೆ ಮಲಗಿಸಿಕೊಂಡು ಮುದ್ದಾಡಿದ್ದಾರೆ.

  ಆಪ್ತ ಸಹಾಯಕನ ಮನೆಗೆ ಯಶ್ ಭೇಟಿ; ಮಗುವನ್ನು ಮುದ್ದಾಡಿ ಚಿನ್ನದ ಸರ ಗಿಫ್ಟ್ ಕೊಟ್ಟ ರಾಕಿ ಭಾಯ್!

  ಮನೆಗೆ ಬಂದ ಯಶ್ ದಂಪತಿಯನ್ನು ಕಂಡು ಆಪ್ತ ಸಹಾಯಕ ಫುಲ್ ಖುಷ್ ಆಗಿದ್ದಾರೆ. ನಿನ್ನೆ (ಫೆ.11) ಯಶ್ ಹಾಗೂ ರಾಧಿಕಾ ಪಂಡಿತ್, ಚೇತನ್ ಅವರ ಮನೆಗೆ ಭೇಟಿ ನೀಡಿದ್ರು. ಮಗುವಿಗೆ ದುಬಾರಿ ಗಿಫ್ಟ್ ಕೂಡ ನೀಡಿದ್ದಾರೆ.

  ಮಗುವಿಗೆ ನಟ ಯಶ್ ಚಿನ್ನದ ಚೈನ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ತಾನೇ ಮಗುವಿಗೆ ಚಿನ್ನದ ಚೈನ್ ಹಾಕಿದ್ದಾರೆ. ಈ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿರ್ದೇಶಕಿ ಗೀತು ಮೋಹನ್​ ದಾಸ್ ಜೊತೆ ನಟ ಯಶ್​ ಟಾಕ್ಸಿಕ್ ಸಿನಿಮಾ ಮಾಡ್ತಿದ್ದಾರೆ. ಕೆಜಿಎಫ್​ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಸದ್ಯ ಟಾಕ್ಸಿಕ್ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

  ಮದ್ಯದ ನಶೆ ಏರಿದ್ಮೇಲೆ ಹಳೆ ಬಟ್ಟೆ ಹಾಕಿಕೊಂಡು ಭಿಕ್ಷುಕನಾಗ್ತಿದ್ದ! ಗಣ್ಯರಿಗೆ ಸನ್ಮಾನ ಮಾಡ್ತಿದ್ದ ಈ ರಾಜ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts