More

    ಮದ್ಯದ ನಶೆ ಏರಿದ್ಮೇಲೆ ಹಳೆ ಬಟ್ಟೆ ಹಾಕಿಕೊಂಡು ಭಿಕ್ಷುಕನಾಗ್ತಿದ್ದ! ಗಣ್ಯರಿಗೆ ಸನ್ಮಾನ ಮಾಡ್ತಿದ್ದ ಈ ರಾಜ!

    ಗುಜರಾತ್​: ಭಾರತ ದೇಶದಲ್ಲಿ ಅನೇಕ ರಾಜ-ಮಹಾರಾಜರುಗಳು ಆಳಿ ಹೋಗಿದ್ದಾರೆ. ಅವರ ಹೆಸರುಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಅವರ ಆಳ್ವಿಕೆ, ಶತ್ರುಗಳೊಂದಿಗೆ ಕೆಚ್ಚೆದೆಯಿಂದ ಹೋರಾಡಿದ್ದು, ಸಾಹಿತ್ಯ-ಸಂಸ್ಕೃತಿಗೆ ಅವರು ನೀಡಿದ ಕೊಡುಗೆಗಳು. ಒಂದೊಂದು ರಾಜನ ಆಳ್ವಿಕೆ ಒಂದು ರೀತಿಯಲ್ಲಿತ್ತು. ರಾಜನ ಸ್ವಭಾವ, ಹವ್ಯಾಸಗಳು ಕೂಡ ಭಿನ್ನವಾಗಿರುತ್ತಿದ್ದವು. ಕೆಲ ರಾಜರ ಹವ್ಯಾಸ, ವರ್ತನೆ ಅಚ್ಚರಿ ಹುಟ್ಟಿಸುವಂತೆ ಇರ್ತಿತ್ತು.

    ಇದನ್ನೂ ಓದಿ:ಸಿಎಂ ಜಗನ್​ ತಮ್ಮ ಚಿಕ್ಕಪ್ಪನನ್ನು ಹತ್ಯೆ ಮಾಡಿದ್ದಾರೆ​: ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಆರೋಪ

    ನಮ್ಮ ದೇಶದಲ್ಲೂ ರಾಜರ ವಿಚಿತ್ರ ಕಥೆಗಳಿವೆ. ಈಗ ನಾವು ಹೇಳುವ ರಾಜ ಉತ್ತಮ ನಿದರ್ಶನ. ಅಂತಹ ಒಂದು ಕಥೆಯು ಗುಜರಾತ್‌ನ ಇಡಾರ್ ರಾಜಪ್ರಭುತ್ವದ ಮಹಾರಾಜ ಶ್ರೀ ಹಿಮ್ಮತ್ ಸಿಂಗ್‌ಜಿ ದೌಲತ್‌ಸಿನ್ಹಜಿ ರಾಥೋಡ್‌ರದ್ದು. ಈ ರಾಜ ಮದ್ಯಪಾನ ಮಾಡ್ತಿದ್ದಂತೆ ರಾಜ ಭಿಕ್ಷುಕನಾಗಿ ಬದಲಾಗ್ತಿದ್ದ. ಬರೀ ವೇಷ ಮಾತ್ರ ಬದಲಾಗ್ತಾ ಇರಲಿಲ್ಲ. ಎಲ್ಲರ ಮುಂದೆ ಭಿಕ್ಷೆ ಬೇಡ್ತಿದ್ದ ರಾಜ, ರಾಜ ಮನೆತನದ ಸದಸ್ಯರು, ಗಣ್ಯರಿಗೆ ನಮಸ್ಕಾರ ಮಾಡ್ತಿದ್ದ.
    ದಿವಾನ್ ಜರ್ಮನಿ ದಾಸ್ ತನ್ನ “ಮಹಾರಾಜ” ಪುಸ್ತಕದಲ್ಲಿ ಈ ರಾಜನನ್ನು ಉಲ್ಲೇಖಿಸಿದ್ದಾನೆ. ಜರ್ಮನಿ ದಾಸ್ ಅವರು ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲು, ಅನೇಕ ರಾಜರ ರಾಜ್ಯಗಳಲ್ಲಿ ರಾಜರು ಮತ್ತು ಚಕ್ರವರ್ತಿಗಳಿಗೆ ನಿಕಟವಾಗಿದ್ದ ವ್ಯಕ್ತಿ.

    ಮದ್ಯದ ನಶೆ ಏರಿದ್ಮೇಲೆ ಹಳೆ ಬಟ್ಟೆ ಹಾಕಿಕೊಂಡು ಭಿಕ್ಷುಕನಾಗ್ತಿದ್ದ! ಗಣ್ಯರಿಗೆ ಸನ್ಮಾನ ಮಾಡ್ತಿದ್ದ ಈ ರಾಜ!

    ಅನೇಕ ರಾಜ ಸಂಸ್ಥಾನಗಳಲ್ಲಿ ದಿವಾನ್ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರು ರಾಜರು ಮತ್ತು ಚಕ್ರವರ್ತಿಗಳ ಜೀವನವನ್ನು ಮತ್ತು ಅವರ ವಿಲಕ್ಷಣತೆಯನ್ನು ಬಹಳ ಹತ್ತಿರದಿಂದ ಗಮನಿಸಿದರು. ನಂತರ ಈ ಬಗ್ಗೆ ಬಹಳ ಆಸಕ್ತಿದಾಯಕ ಕಥೆಗಳೊಂದಿಗೆ ಪುಸ್ತಕವನ್ನು ಬರೆದಿದ್ದಾರೆ.
    ರಾಜ, ಹಿಮ್ಮತ್ ಸಿಂಗ್‌ಜಿ ದೌಲತ್‌ಸಿನ್ಹಜಿ ರಾಥೋಡ್‌, ಏಪ್ರಿಲ್ 4, 1931 ರಂದು ಅಧಿಕಾರವಹಿಸಿಕೊಂಡಿದ್ದರು. ಇಂಗ್ಲೆಂಡ್ ಮೇಲೆ ವಿಶೇಷ ಒಲವಿದ್ದ ರಾಜ, ಮೂರು ನಾಲ್ಕು ವರ್ಷಕ್ಕೊಮ್ಮೆ ಅಲ್ಲಿಗೆ ಭೇಟಿ ನೀಡುತ್ತಿದ್ದರು. ಅವರ ಅರಮನೆಯಲ್ಲಿ ಆಗಾಗ ಪಾರ್ಟಿಗಳು ನಡೆಯುತ್ತಿದ್ದವು. ಪಾರ್ಟಿ ಮಾಡಿದ ನಂತ್ರ ರಾಜ ಸಂಪೂರ್ಣ ಬದಲಾಗುತ್ತಿದ್ದ. ರಾಜ, ಸ್ಕಾಚ್ ನ ಕೆಲವು ಪೆಗ್ ಗಳನ್ನು ಕುಡಿದಾಗ ಅವರನ್ನು ನೋಡಿದ್ರೆ ಅಪರಿಚಿತರು ಅಚ್ಚರಿಗೊಳಗಾಗ್ತಿದ್ದರು. ಯಾಕೆಂದ್ರೆ ರಾಜನ ಬಟ್ಟೆ ಬದಲಾಗುತ್ತಿತ್ತು. ರಾಜ ಹರಿದ ಬಟ್ಟೆಯನ್ನು ಧರಿಸುತ್ತಿದ್ದ.

    ಮದ್ಯದ ನಶೆ ಏರಿದ್ಮೇಲೆ ಹಳೆ ಬಟ್ಟೆ ಹಾಕಿಕೊಂಡು ಭಿಕ್ಷುಕನಾಗ್ತಿದ್ದ! ಗಣ್ಯರಿಗೆ ಸನ್ಮಾನ ಮಾಡ್ತಿದ್ದ ಈ ರಾಜ!

    ಕೂದಲು ಕೆದರಿಕೊಂಡು ಧೂಳು ಮತ್ತು ಬೂದಿಯನ್ನು ಹಚ್ಚಿಕೊಳ್ತಿದ್ದ. ವೇಷ ಬದಲಾದ ಮೇಲೆ ಮತ್ತೆ ಪಾರ್ಟಿ ಹಾಲ್ ಗೆ ಬರ್ತಿದ್ದ ರಾಜ, ಭಿಕ್ಷಾ ಪಾತ್ರೆ ಹಿಡಿದು ಭಿಕ್ಷೆ ಬೇಡುತ್ತಿದ್ದ. ನಾನೊಬ್ಬ ಬಡವ, ಭಿಕ್ಷುಕ. ತುಂಬಾ ದಿನಗಳಲ್ಲಿ ಊಟ ಮಾಡಿಲ್ಲ. ಹಸಿವಿನಿಂದ ಬಳಲುತ್ತಿದ್ದೇನೆ. ನನಗೆ ಒಂದು ಪೈಸೆ ನೀಡಿ ಎಂದು ಬೇಡುತ್ತಿದ್ದ. ಆಸ್ಥಾನಿಕರಿಗೆ ಈ ವಿಷ್ಯ ಗೊತ್ತಿರುವ ಕಾರಣ ಅವರು, ರಾಜನ ತಟ್ಟೆಗೆ ನಾಣ್ಯವನ್ನು ಹಾಕುತ್ತಿದ್ದರು. ನಾಣ್ಯವನ್ನು ನೀಡಿದ ಮೇಲೆ ರಾಜ, ಎಲ್ಲರಿಗೂ ತಲೆ ಬಗ್ಗಿಸಿ ನಮಸ್ಕಾರ ಮಾಡುತ್ತಿದ್ದ. ಕುಡಿದ ಸಮಯದಲ್ಲಿ ಸಂಪೂರ್ಣ ಭಿಕ್ಷುಕನಂತೆ ಆಡ್ತಿದ್ದ ರಾಜ. ಅಪರಿಚಿತರು ಇಲ್ಲಿಗೆ ಬಂದ್ರೆ ಅಚ್ಚರಿಗೊಳಪಡುತ್ತಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

    ಮದ್ಯದ ನಶೆ ಏರಿದ್ಮೇಲೆ ಹಳೆ ಬಟ್ಟೆ ಹಾಕಿಕೊಂಡು ಭಿಕ್ಷುಕನಾಗ್ತಿದ್ದ! ಗಣ್ಯರಿಗೆ ಸನ್ಮಾನ ಮಾಡ್ತಿದ್ದ ಈ ರಾಜ!

    ರಾಜ ಅತ್ಯಂತ ಶ್ರೀಮಂತನಾಗಿದ್ದ. ಕುದುರೆ ರೇಸ್ ಗೆ ಹಣ ಹಾಕ್ತಿದ್ದ. ಪೂನಾ, ಕಲ್ಕತ್ತಾ, ಮುಂಬೈ, ಬೆಂಗಳೂರಿನ ಕುದುರೆ ರೇಸ್ ನಲ್ಲಿ ಕಾಲ ಕಳೆಯುತ್ತಿದ್ದ ರಾಜ, ರಾಜ್ಯಕ್ಕೆ ಅನೇಕ ಕಲ್ಯಾಣ ಕೆಲಸಗಳನ್ನು ಮಾಡಿದ್ದ. ಇಂಗ್ಲೀಸ್ ಹುಡುಗಿ ಮದುವೆಯಾಗಲು ಮುಂದಾಗಿದ್ದ ರಾಜನಿಗೆ ಪಾರ್ಸಿ ಹುಡುಗಿ ಸಿಕ್ಕಿದ್ದಳು. ಎಲ್ಲ ರಾಣಿಯರಿಗಿಂತ ಆಕೆ ಮೇಲೆ ವಿಶೇಷ ಪ್ರೀತಿ ರಾಜನಿಗಿತ್ತು. ಕುಡಿದ ಮತ್ತಿನಲ್ಲಿ ರಾಜ ಕೆಲವೊಮ್ಮೆ ಬೆಳಗಿನ ಜಾವ ಸೈನಿಕರಿಗೆ ಪರೇಡ್ ಮಾಡುವಂತೆ ಆದೇಶ ಮಾಡುತ್ತಿದ್ದ. ಪರೇಡ್ ಮುಗಿದ ನಂತ್ರ ಹುಲ್ಲಿನ ಮೇಲೆ ಹೊರಳಾಡುತ್ತಿದ್ದ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

    ಮಹಾರಾಜರು ಇಂಗ್ಲಿಷ್ ಮಹಿಳೆಯನ್ನು ಮದುವೆಯಾಗಲು ಬಯಸಿದ್ದರು. ಇದು ಸಾಧ್ಯವಾಗದಿದ್ದಾಗ ಅವರು ನರ್ಗೀಸ್ ಎಂಬ ಪಾರ್ಸಿ ಹುಡುಗಿಯನ್ನು ಮದುವೆಯಾಗಿದ್ದರು. ಯಾರಿಗೆ ಅವನು ತನ್ನ ಹೆಂಡತಿಯ ಸ್ಥಾನಮಾನವನ್ನು ಕೊಟ್ಟನು. ಮಹಾರಾಜರಿಗೆ ಇತರ ಅನೇಕ ಹೆಂಡತಿಯರಿದ್ದರೂ ನರ್ಗೀಸ್ ಅವರ ನೆಚ್ಚಿನವಳಾಗಿದ್ದಳು. ನಂತರ ಈ ರಾಣಿ ರಾಜನನ್ನು ಮೋಸಗೊಳಿಸಿ ಆತನಿಂದ ಅಪಾರ ಹಣ ಮತ್ತು ಆಭರಣಗಳನ್ನು ಪಡೆದಳು ಎಂದು ಹೇಳಲಾಗಿದೆ.

     

    1,400 ಉದ್ಯೋಗಿಗಳನ್ನು ವಜಾಗೊಳಿಸಲು ಸಜ್ಜಾದ ಸ್ಪೈಸ್​ಜೆಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts