More

  ದರ್ಶನ್ ಚಂದನವನ ಜರ್ನಿಗೆ 25 ವರ್ಷ: ಶ್ರೀರಂಗಪಟ್ಟಣದಲ್ಲಿ ಅದ್ಧೂರಿ ಉತ್ಸವ! ಹೀಗಿದೆ ಕಾರ್ಯಕ್ರಮದ ವಿವರ?

  ಬೆಂಗಳೂರು: ನಟ ದರ್ಶನ್‌ ಚಂದನವನಕ್ಕೆ ಪದಾರ್ಪಣೆ ಮಾಡಿ ಭರ್ತಿ 25 ವರ್ಷ ಕಳೆದ ಹಿನ್ನೆಲೆಯಲ್ಲಿ. ಇದೇ ಶುಭ ಸಂದರ್ಭದಲ್ಲಿ ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅರ್ಥಪೂರ್ಣವಾದ ಸಮಾರಂಭವೊಂದನ್ನು ಏರ್ಪಡಿಸಿದ್ದಾರೆ. ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಮೈದಾನದಲ್ಲಿ ದರ್ಶನ್‌ ಅವರ ಬೆಳ್ಳಿ ಪರ್ವ ಕಾರ್ಯಕ್ರಮ ನಡೆಯಲಿದೆ.

  ಮಾಸ್ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಂಡ ದರ್ಶನ್ ಇತ್ತೀಚಿನ ವರ್ಷಗಳಲ್ಲಿ ಕಥೆಗಳ ಆಯ್ಕೆಯಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಿ ಗೆಲ್ಲುತ್ತಿದ್ದಾರೆ. ಈಗಾಗಲೇ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ದರ್ಶನ್ ದೊಡ್ಡ ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿದ್ದಾರೆ. ಬರೀ ಸಿನಿಮಾ ಮಾತ್ರವಲ್ಲ ತಮ್ಮ ನೇರ ನಡೆ, ನುಡಿ, ಸಹಾಯಗುಣ ಹಾಗೂ ಪ್ರಾಣಿ ಪ್ರೇಮದಿಂದಲೂ ದರ್ಶನ್ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

  ದರ್ಶನ್ ಚಂದನವನ ಜರ್ನಿಗೆ 25 ವರ್ಷ: ಶ್ರೀರಂಗಪಟ್ಟಣದಲ್ಲಿ ಅದ್ಧೂರಿ ಉತ್ಸವ! ಹೀಗಿದೆ ಕಾರ್ಯಕ್ರಮದ ವಿವರ?

  26 ವರ್ಷಗಳ ತಮ್ಮ ಸಿನಿಮಾ ಪ್ರಯಾಣವನ್ನು ಸ್ಮರಿಸುತ್ತಾ, ಅಭಿಮಾನಿಗಳು ಈ ಮೈಲಿಗಲ್ಲನ್ನು ಆಚರಿಸಲು ಒಗ್ಗೂಡಿದ್ದಾರೆ, ವಿಶೇಷವಾಗಿ ಅವರ ಕೆಲವು ಸಾಂಪ್ರದಾಯಿಕ ಚಲನಚಿತ್ರಗಳ ಮರು-ಬಿಡುಗಡೆಯನ್ನು ಆಯೋಜಿಸಿದ್ದಾರೆ.

  ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ನಟನೆಯ ‘ಕಾಟೇರ’ ಸಿನಿಮಾದಲ್ಲಿ ತೋರಿಸಿದ ರೈತರ ಕಥೆ ಎಲ್ಲರಿಗೂ ಇಷ್ಟ ಆಗಿದೆ. ಈ ಸಿನಿಮಾದ ಯಶಸ್ಸನ್ನು ಚಿತ್ರತಂಡದವರು ಸಂಭ್ರಮಿಸುತ್ತಿದ್ದಾರೆ. ಇದರ ಜೊತೆಗೆ ದರ್ಶನ್​ ಅವರಿಗೆ ‘ಕರ್ನಾಟಕ ರಾಜ್ಯ ರೈತ ಸಂಘ’ದ ಪರವಾಗಿ ‘ಭೂಮಿಪುತ್ರ’ ಎಂಬ ಹೊಸ ಬಿರುದನ್ನು ನೀಡಲಾಗಿದೆ. ಈ ವೇಳೆ ತಾವು ಚಿತ್ರರಂಗದಲ್ಲಿ ಕಂಡ ಏಳು ಬೀಳುಗಳ ಬಗ್ಗೆ ಮಾತನಾಡಿದ್ದಾರೆ.

  ಫೆ.16ರಂದು ದರ್ಶನ್‌ ಬರ್ತ್‌ಡೇ: ಇನ್ನು ಫೆಬ್ರವರಿ 16ರಂದು ನಟ ದರ್ಶನ ಅವರ ಬರ್ತ್‌ಡೇ. ಈ ದಿನದಂದು ಡೆವಿಲ್‌ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಆಗಲಿದೆ. ಇನ್ನುಳಿದಂತೆ, ಅವರ ಬೇರೆ ಬೇರೆ ಸಿನಿಮಾಗಳು ಘೋಷಣೆ ಆಗುವ ಸಾಧ್ಯತೆಗಳಿವೆ. ಈ ನಡುವೆ ಅಭಿಮಾನಿ ಬಳಗದಲ್ಲೂ ಡೆವಿಲ್‌ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಾಗಿದೆ.

  darshan 3

  ಸ್ನೇಹಿತರಿಂದ ಸಮಾರಂಭ: ನಟ ದರ್ಶನ್‌ ಚಂದನವನಕ್ಕೆ ಪದಾರ್ಪಣೆ ಮಾಡಿ ಭರ್ತಿ 25 ವರ್ಷ ಕಳೆದ ಹಿನ್ನೆಲೆಯಲ್ಲಿ. ಇದೇ ಶುಭ ಸಂದರ್ಭದಲ್ಲಿ ದರ್ಶನ್ ಅವರ ನೆಚ್ಚಿನ ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ಅರ್ಥಪೂರ್ಣವಾದ ಸಮಾರಂಭವೊಂದನ್ನು ಏರ್ಪಡಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಶ್ರೀಗಳು, ಶ್ರೀ ಸುತ್ತೂರು ಶ್ರೀಗಳು, ಬೀಬಿಮಠದ ಶ್ರೀಗಳ ಸಾನಿಧ್ಯದಲ್ಲಿ ಹಾಗೂ ಸಂಸದೆ, ಚಿತ್ರನಟಿ ಸುಮಲತಾ ಅಂಬರೀಶ್ ಅವರ ಉಪಸ್ಥಿತಿಯಲ್ಲಿ ವಿಶೇಷ ಕಾರ್ಯಕ್ರಮ ನೆರವೇರಲಿದೆ.

  ದರ್ಶನ್ ಚಂದನವನ ಜರ್ನಿಗೆ 25 ವರ್ಷ: ಶ್ರೀರಂಗಪಟ್ಟಣದಲ್ಲಿ ಅದ್ಧೂರಿ ಉತ್ಸವ! ಹೀಗಿದೆ ಕಾರ್ಯಕ್ರಮದ ವಿವರ?

  ಶ್ರೀರಂಗಪಟ್ಟಣದಲ್ಲಿ ಕಾರ್ಯಕ್ರಮ: ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಮೈದಾನದಲ್ಲಿ ದರ್ಶನ್‌ ಅವರ ಬೆಳ್ಳಿ ಪರ್ವ ಕಾರ್ಯಕ್ರಮ ನಡೆಯಲಿದೆ. ಬರೀ ಇದಷ್ಟೇ ಅಲ್ಲದೆ, ಹಲವು ಸಾಮಾಜಿಕ ಕಾರ್ಯಕ್ರಮಗಳು ಇದೇ ವೇಳೆ ಜರುಗಲಿವೆ. ಈ ಬೆಳರ್ಳಿ ಪರ್ವದ ಕಾರ್ಯಗಳ ಉಸ್ತುವಾರಿಯನ್ನು ದರ್ಶನ್ ಅವರ ಆತ್ಮೀಯರಾದ ಎಸ್. ಸಚ್ಚಿದಾನಂದ ಇಂಡುವಾಳು ವಹಿಸಿಕೊಂಡಿದ್ದಾರೆ.

  Darshan

  ಯಾವಾಗ ಬೆಳ್ಳಿ ಪರ್ವ?: ಫೆಬ್ರವರಿ 17ರ ಶನಿವಾರ ಸಂಜೆ 5 ಗಂಟೆಗೆ ಬೆಳ್ಳಿ ಪರ್ವ ಡಿ-25 ಎಂಬ ಕಾರ್ಯಕ್ರಮ ನಡೆಯಲಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ನಡೆಯಲಿದ್ದು, ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವ ದರ್ಶನ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜತೆಗೆ ವಿ.ಹರಿಕೃಷ್ಣ ಸಂಗೀತ ಸಂಜೆ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ಇರಲಿವೆ.

  ದರ್ಶನ್ ಚಂದನವನ ಜರ್ನಿಗೆ 25 ವರ್ಷ: ಶ್ರೀರಂಗಪಟ್ಟಣದಲ್ಲಿ ಅದ್ಧೂರಿ ಉತ್ಸವ! ಹೀಗಿದೆ ಕಾರ್ಯಕ್ರಮದ ವಿವರ?

  ತಾರಾ ಮೆರುಗು: ವಿನೋದ್ ರಾಜ್, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಡಾಲಿ ಧನಂಜಯ್, ಅಭಿಷೇಕ್ ಅಂಬರೀಶ್, ಧನ್ವೀರ್, ಚಿಕ್ಕಣ್ಣ, ಝೈದ್ ಖಾನ್, ಶಿವರಾಜ್ ಕೆ.ಆರ್.ಪೇಟೆ ಹಾಗೂ ಸೂರಜ್ ಸೇರಿದಂತೆ ಸಾಕಷ್ಟು ನಟ, ನಟಿಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇತ್ತ ನಟಿಯರಾದ ನಿಮಿಕಾ ರತ್ನಾಕರ್, ನಿಶ್ವಿಕಾ ನಾಯ್ಡು, ಬೃಂದಾ ಆಚಾರ್ಯ, ಶರಣ್ಯ ಶೆಟ್ಟಿ, ನಮ್ರತಾ ಗೌಡ, ತನ್ವಿಯ ಬಾಲರಾಜ್, ಪ್ರಿಯಾಂಕ ಗೌಡ ವಿಶೇಷ ನೃತ್ಯ ಪ್ರದರ್ಶನ ನೀಡಲಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts