ಸ್ವಿಟ್ಜರ್ಲೆಂಡ್‌ನಲ್ಲಿ ಸಮಂತಾ ರುತ್ ಪ್ರಭು ಸ್ಕೀಯಿಂಗ್‌! ಫೋಟೋ ವೈರಲ್...

Published on
ನಟಿ ಸಮಂತಾ ರುತ್ ಪ್ರಭು ಅವರು ನಟ ನಾಗಚೈತನ್ಯದಿಂದ ಬೇರ್ಪಡುವುದಾಗಿ ಘೋಷಿಸಿದಾಗಿನಿಂದ, ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ ಎಂದೇ ಹೇಳಬೇಕು. ವಿಚ್ಛೇದನ ಬಳಿಕ ನಟಿ ಸಮಂತಾ ರಿಷಿಕೇಶ, ಗೋವಾ ಮತ್ತು ದುಬೈಗೆ ಪ್ರಯಾಣಿಸಿ ಅವರ ಹಾಲಿಡೇಗಳನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಇದೀಗ, ನಟಿ ಸಮಂತಾ ಸ್ವಿಟ್ಜರ್ಲೆಂಡ್‌ನಲ್ಲಿದ್ದಾರೆ. ಅಲ್ಲಿ ಸ್ಕೀಯಿಂಗ್‌ ಚುಟುವಟಿಕೆಯನ್ನು ಹಿಮ ಪರ್ವತಗಳಲ್ಲಿ ಟ್ರೈ ಮಾಡಿ ಮಸ್ತ್ ಮಜಾ ಮಾಡಿದ್ದಾರೆ. ಹಳದಿ ಮತ್ತು ಬಿಳಿ ಬಟ್ಟೆಗಳನ್ನು ಧರಿಸಿದ್ದು ಹಿಮ ಪರ್ವತದ ಮೇಲೆ ನಿಂತಿರುವ ಅವರ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಟಿ ಸಮಂತಾ ಹಂಚಿಕೊಂಡಿರುವ ಆ ಫೋಟೋ, ಇದೀಗ ಸಖತ್ ವೈರಲ್ ಆಗುತ್ತಿದ್ದು, “4 ನೇ ದಿನವು ಸ್ಕೀಯಿಂಗ್‌ ಮ್ಯಾಜಿಕ್... #skiingainteasybutitsureisfun'', ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಆ ಫೋಟೋಗೆ ಬರೋಬ್ಬರಿ 1 ಮಿಲಿಯನ್ ಗೂ ಹೆಚ್ಚು ಲೈಕ್ಸ್ ಇದ್ದು, 4000 ಕ್ಕೂ ಗೆಚ್ಚು ಕಾಮೆಂಟ್​ಗಳು ಇವೆ. ಇನ್ನು, ಕೆಲಸದ ಮುಂಭಾಗದಲ್ಲಿ, ನಟಿ ಸಮಂತಾ ಇತ್ತೀಚೆಗೆ ''ಪುಷ್ಪಾ: ದಿ ರೈಸ್'' ಸಿನಿಮಾದ ''ಊ ಅಂಟಾವಾ ಮಾವಾ'' ಎಂಬ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಿ ಬಹಳಷ್ಟು ಖ್ಯಾತಿ ಗಳಿಸಿದ್ದಾರೆ. ಜತೆಗೆ, ನಟಿ ಶೀಘ್ರದಲ್ಲೇ 'ಶಾಕುಂತಲಂ', 'ದಿ ಅರೇಂಜ್‌ಮೆಂಟ್ಸ್ ಆಫ್ ಲವ್' ಮತ್ತು ಬೇರೆ ಬೇರೆ ಚಿತ್ರಗಳಲ್ಲಿ ಮಿಂಚಲಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net