ಸಮಂತಾ ಹೂಂ ಎನ್ನಲಿಲ್ಲ.. ಉಹೂಂ ಎನ್ನಲೂ ಇಲ್ಲ; ಈ ಬಾರಿಯೂ ಉತ್ತರ ಸಿಗಲಿಲ್ಲ...

Samantha
Published on

ಸಮಂತಾ ಬಾಲಿವುಡ್​ಗೆ ಹೋಗುತ್ತಾರೆ ಎಂಬುದು ಹಳೆಯ ಸುದ್ದಿ. ‘ದಿ ಫ್ಯಾಮಿಲಿ ಮ್ಯಾನ್ 2’ ಬಿಡುಗಡೆಯಾದಾಗಿನಿಂದ ಈ ಸುದ್ದಿ ಕೇಳಿ ಬರುತ್ತಲೇ ಇದೆ. ತಾಪ್ಸೀ ಪನ್ನು ನಿರ್ವಣದ ಹೊಸ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಹೇಳಲಾಗಿದ್ದು, ಸಮಂತಾ ಮಾತ್ರ ಇದುವರೆಗೂ ಹೌದು ಎಂದು ಹೇಳಿಲ್ಲ, ಇಲ್ಲ ಎಂದು ನಿರಾಕರಿಸಿಯೂ ಇಲ್ಲ.

ಈ ಬಾರಿಯಾದರೂ ಸಮಂತಾ ಏನಾದರೂ ಮಾತನಾಡಬಹುದು ಎಂದು ಆಸೆಪಟ್ಟಿದ್ದಷ್ಟೇ ಬಂತು. ಆದರೆ, ಅದು ಸುಳ್ಳಾಗಿದೆ. ಇತ್ತೀಚೆಗೆ ಸಮಂತಾ ಒಂದು ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ನೀವು ಬಾಲಿವುಡ್​ಗೆ ಹೋಗುತ್ತಿದ್ದೀರಾ? ಎಂಬ ಪ್ರಶ್ನೆ ಕೇಳಲಾಗಿದೆ.

ಅದಕ್ಕೆ ಉತ್ತರಿಸಿರುವ ಅವರು, ‘ಯಾಕಾಗಬಾರದು? ಒಳ್ಳೆಯ ಕಥೆ ಬಂದರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ. ನನಗೆ ಭಾಷೆ ಮುಖ್ಯ ಅಲ್ಲ, ಯಾವ ತರಹದ ಪಾತ್ರ ಬಂದಿದೆ ಎಂಬುದಷ್ಟೇ ಮುಖ್ಯ. ಆ ಪಾತ್ರಕ್ಕೆ ನನ್ನಿಂದ ನ್ಯಾಯ ಸಲ್ಲಿಸು ವುದಕ್ಕೆ ಸಾಧ್ಯವಾ ಎಂಬುದಷ್ಟೇ ಮುಖ್ಯ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net