ಸಮಂತಾ ಹಂಚಿಕೊಂಡ ಚಿತ್ರವೊಂದರಲ್ಲಿ, ಅವರು ಮುದ್ರಿತ ಮೊನೊಕಿನಿ ಸ್ಟೈಲ್ನ ಬಿಕಿನ ಧರಿಸಿರುವುದನ್ನು ಕಾಣಬಹುದು. ಆ ಚಿತ್ರದಲ್ಲಿ ತಮ್ಮ ನಗು ಹೇಳುತ್ತೆ ಅವರು ಎಷ್ಟು ಸಂತೋಷವಾಗಿದ್ದಾರೆ ಅಂತ. ಇನ್ನೊಂದು ಚಿತ್ರದಲ್ಲಿ, ನಟಿ ತನ್ನ ಸ್ನೇಹಿತರೊಂದಿಗೆ ಬೀಚ್ನಲ್ಲಿ ಆಡುತ್ತಿರುವುದು ಕಾಣಿಸಿಕೊಂಡಿದೆ. ಸದ್ಯ, ನಟಿಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೆಲವರಂತೂ, ನಟಿ ವಿಚ್ಛೇದನದ ಬಳಿಕ ಜೀವನದಲ್ಲಿ ತುಂಬಾ ಖುಷಿಯಾಗಿದ್ದಾರೆ ಎಂದು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ.