ಅಲ್ಲು ಅರ್ಜುನ್ ಪುಷ್ಪಾದಲ್ಲಿ ಸಮಂತಾ ಐಟಂ ಡಾನ್ಸ್?

Samantha
Published on

ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದ ಮೊದಲ ಭಾಗ ಡಿಸೆಂಬರ್ 17ಕ್ಕೆ ಬಿಡುಗಡೆಯಾಗಲಿದೆ. ಎರಡು ಹಾಡುಗಳನ್ನು ಹೊರತುಪಡಿಸಿ, ಮಿಕ್ಕಂತೆ ಚಿತ್ರದ ಚಿತ್ರೀಕರಣ ಮುಗಿದಿದೆ. ಅದರಲ್ಲೂ ಒಂದು ಐಟಂ ಡಾನ್ಸ್​ನ ಚಿತ್ರೀಕರಣ ಬಾಕಿ ಇದ್ದು, ಆ ಹಾಡಿನಲ್ಲಿ ಯಾರು ಹೆಜ್ಜೆ ಹಾಕುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ಬಂದಿರುವ ಸುದ್ದಿಯ ಪ್ರಕಾರ, ಆ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಸಮಂತಾ ಒಪ್ಪಿಕೊಂಡಿದ್ದಾರಂತೆ. ಈ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಅವರಿಗೆ ಆಫರ್ ಕೊಟ್ಟಿದ್ದು ನಿರ್ದೇಶಕ ಸುಕುಮಾರ್.

ಸಮಂತಾಗೆ ‘ರಂಗಸ್ಥಲಂ’ ಮೂಲಕ ದೊಡ್ಡ ಬ್ರೇಕ್ ಕೊಟ್ಟವರು ಅದೇ ಸುಕುಮಾರ್. ಅಂಥವರು ಅವಕಾಶ ಕೊಟ್ಟರೆ ಇಲ್ಲ ಎನ್ನುವುದಕ್ಕಾಗುತ್ತದೆಯೇ? ಮೇಲಾಗಿ ಸಮಂತಾ ಇತ್ತೀಚೆಗೆ ನಟಿಸಿದ್ದು ಹೆಚ್ಚಾಗಿ ಮಹಿಳಾ ಪ್ರಧಾನ ಚಿತ್ರಗಳಲ್ಲೇ. ಡಿವೋರ್ಸ್ ನಂತರ ಚಿತ್ರರಂಗಕ್ಕೆ ರೀಎಂಟ್ರಿ ಕೊಡುವುದಕ್ಕೆ ಸಮಂತಾಗೆ ಒಂದು ದೊಡ್ಡ ಬಜೆಟ್​ನ ಮತ್ತು ಸ್ಟಾರ್ ಚಿತ್ರದ ಅವಶ್ಯಕತೆ ಇದ್ದು, ‘ಪುಷ್ಪಾ’ಗಿಂತ ಇನ್ನೊಂದು ಚಿತ್ರ ಸಿಗುವುದಕ್ಕೆ ಸಾಧ್ಯವೇ? ಹಾಗಾಗಿ, ಅಂಥದ್ದೊಂದು ಅವಕಾಶ ಸಿಗುತ್ತಿದ್ದಂತೆಯೇ ತಕ್ಷಣ ಒಪ್ಪಿದ್ದಾರಂತೆ ಸಮಂತಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net