ಹೊಸಬರ ‘ಸಾಲ್ಟ್​’ ಚಿತ್ರಕ್ಕೆ ಪೂರ್ಣಾಂಕ ನೀಡಿದ ನಾದಬ್ರಹ್ಮ ಹಂಸಲೇಖ

Hamsalekha with Team (1)
Published on

ಬೆಂಗಳೂರು: ಹೊಸಬರೇ ಸೇರಿ ಸಿದ್ದಪಡಿಸಿರುವ ’ಸಾಲ್ಟ್’ ಚಿತ್ರ ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ವಿಶೇಷ ಏನೆಂದರೆ, ಈ ಸಿನಿಮಾವನ್ನು ನಾದಬ್ರಹ್ಮ ಹಂಸಲೇಖ ಕಣ್ತುಂಬಿಕೊಂಡಿದ್ದು, ಚಿತ್ರತಂಡದ ಶ್ರಮಕ್ಕೆ ಪೂರ್ಣಾಂಕ ನೀಡಿದ್ದಾರೆ.

ಹೌದು, ರಾಜ್ಯದ ಹಲವು ಚಿತ್ರಮಂದಿರ ಸೇರಿ ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆ ಆಗಿರುವ ಸಾಲ್ಟ್​ ಚಿತ್ರವನ್ನು ಭರತ್ ನಂದ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜತೆಗೆ ಚಿತ್ರದಲ್ಲಿಯೂ ನಾಲ್ವರು ನಾಯಕರ ಪೈಕಿ ಒಬ್ಬರಾಗಿ ನಟಿಸಿದ್ದಾರೆ. ಚೇತನ್‌ಕುಮಾರ್, ಚಂದ್ರುಛತ್ರಪತಿ, ಸತೀಶ್‌ಮಳವಳ್ಳಿ ಇನ್ನುಳಿದ ನಾಯಕರು. ಅಡುಗೆಗೆ ಉಪ್ಪು ಎಷ್ಟು ಮುಖ್ಯವೋ ಅದೇ ರೀತಿ ಸಾಲ್ಟ್​ ಚಿತ್ರದ ನಾಲ್ಕು ಪ್ರಮುಖ ಪದಾರ್ಥಗಳಂತೆ ಪಾತ್ರಗಳು ಮೂಡಿಬಂದಿವೆ.



ಇನ್ನುಳಿದಂತೆ ತಾರಾಗಣದಲ್ಲಿ ಬಲರಾಜವಾಡಿ, ಸಂದೀಪ್, ವಿಜಯಶ್ರೀ ಕಲಬುರ್ಗಿ, ಯಶಸ್ವಿನಿ ಶೆಟ್ಟಿ, ರಶ್ಮಿತ ಗೌಡ, ಸೂರ್ಯೋದಯ್‌ ಪೆರಂಪಳ್ಳಿ, ಚಕ್ರವರ್ತಿ ದಾವಣಗೆರೆ, ಹರ್ಷ ಮುಂತಾದವರು ನಟಿಸಿದ್ದಾರೆ. ರಾಘವೇಂದ್ರ ಕಾಮತ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಯಲಸ್ಟಿನ್- ಯಧುನಂದನ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ.

ಛಾಯಾಗ್ರಹಣ ಸಂತೋಷ್‌ ದಯಾಲನ್, ಸಂಕಲನ ವಿನಯ್‌ ಕುಮಾರ್, ನೃತ್ಯ ಮಧುಸೂದನ್, ಸಂಭಾಷಣೆ ಸತೀಶ್‌ ಮಳವಳ್ಳಿ ಅವರದ್ದಾಗಿದೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಶಾಲಿನಿ.ಎಂ. ಅವರು ರಾಜರತ್ನ ಸ್ಟುಡಿಯೋ ಮೂಲಕ ಚಿತ್ರ ನಿರ್ಮಾಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net