ಮೊದಲು ಸಾಮಾಜಿಕ ನಂತರ ಐತಿಹಾಸಿಕ

Darshan
Published on

ಬೆಂಗಳೂರು: ದರ್ಶನ್ ಅವರ ಮುಂದಿನ ಚಿತ್ರ ಯಾವುದು? ಈ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲ ಇದ್ದೇ ಇದೆ. ಲಾಕ್​ಡೌನ್​ಗೂ ಮುನ್ನ ದರ್ಶನ್, ರಾಕ್​ಲೈನ್ ವೆಂಕಟೇಶ್ ನಿರ್ವಣದ ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಿದ್ದರು. ಲಾಕ್​ಡೌನ್ ಮುಗಿದ ನಂತರ ಆ ಚಿತ್ರವನ್ನು ಮುಂದುವರೆಸಬೇಕಿತ್ತು. ಆದರೆ, ಆ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿರುವ ಸುದ್ದಿ ಇದೆ.

ದರ್ಶನ್ ಬಹಳ ಇಷ್ಟಪಟ್ಟು ಒಪ್ಪಿಕೊಂಡ ಚಿತ್ರ ‘ರಾಜವೀರ ಮದಕರಿ ನಾಯಕ’. ಈಗಾಗಲೇ, ಕಳೆದ ವರ್ಷ ಸ್ವಲ್ಪ ಚಿತ್ರೀಕರಣ ಸಹ ಆಗಿದೆ. ಹಾಗಿರುವಾಗ, ಅದನ್ನು ಪಕ್ಕಕ್ಕಿಟ್ಟು ಇನ್ನೊಂದು ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿರುವ ಕಾರಣವೇನು ಎಂಬ ಪ್ರಶ್ನೆ ಬರಬಹುದು. ಚಿತ್ರದ ಬಜೆಟ್ ಹೆಚ್ಚಿರುವ ಕಾರಣ ಮತ್ತು ಕರೊನಾದಿಂದ ಎಲ್ಲರೂ ಸಂಕಷ್ಟ ಎದುರಿಸುತ್ತಿರುವಾಗ, ಇಷ್ಟೊಂದು ಬಜೆಟ್ ಹೂಡಿಕೆ ಮಾಡಿದರೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಚಿತ್ರವನ್ನು ಸ್ವಲ್ಪ ಮುಂದೂಡಲಾಗಿದೆಯಂತೆ. ಅದರ ಬದಲು, ರಾಕ್​ಲೈನ್ ಪ್ರೊಡಕ್ಷನ್ಸ್​ಗೆ ಇನ್ನೊಂದು ಸಿನಿಮಾ ಮಾಡುತ್ತಿದ್ದು, ಈ ಚಿತ್ರದ ಮೂಲಕ ರಾಕ್​ಲೈನ್ ವೆಂಕಟೇಶ್ ಅವರ ಮಗ ಯತೀಶ್ ಬಾಬು ಪೂರ್ಣಪ್ರಮಾಣದ ನಿರ್ವಪಕರಾ ಗುತ್ತಿದ್ದಾರಂತೆ. ಇದೊಂದು ಸಾಮಾಜಿಕ ಚಿತ್ರವಾಗಿದ್ದು, ಯಾರು ನಿರ್ದೇಶಿಸುತ್ತಾರೆ ಮತ್ತು ಯಾರೆಲ್ಲ ಇರುತ್ತಾರೆ ಎಂಬ ವಿಷಯ ಸದ್ಯದಲ್ಲೇ ಬಹಿರಂಗವಾಗಲಿದೆಯಂತೆ.

ತೆಲುಗು ನಿರ್ಮಾಪಕರಿಗೆ ದರ್ಶನ್ ಚಿತ್ರ: ಇನ್ನು, ದರ್ಶನ್ ಅವರು ತೆಲುಗು ನಿರ್ವಪಕರು ನಿರ್ವಿುಸುತ್ತಿರುವ ಕನ್ನಡ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಆ ನಿರ್ವಪಕರು ಯಾರು ಎಂದು ಗೊತ್ತಿರಲಿಲ್ಲ. ‘ಛತ್ರಪತಿ’, ‘ಡಾರ್ಲಿಂಗ್’, ‘ನಾನಕು ಪ್ರೇಮತೋ’ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ವಿುಸಿರುವ ಜನಪ್ರಿಯ ನಿರ್ವಪಕ ಬಿ.ವಿ.ಎಸ್.ಎನ್ ಪ್ರಸಾದ್ ನಿರ್ವಣದ ಹೊಸ ಚಿತ್ರದಲ್ಲಿ ದರ್ಶನ್ ನಟಿಸುವುದು ಪಕ್ಕಾ ಆಗಿದೆ. ಶುಕ್ರವಾರ, ಹೈದರಾಬಾದ್​ನಲ್ಲಿ ‘ರಾಬರ್ಟ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿದ್ದು, ಈ ಸಂದರ್ಭದಲ್ಲಿ ದರ್ಶನ್, ಪ್ರಸಾದ್ ಅವರ ಜತೆಗೆ ಚಿತ್ರ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಈ ಚಿತ್ರ ಪ್ರಾರಂಭವಾಗುವುದಕ್ಕೆ ಒಂದಿಷ್ಟು ಸಮಯ ಇದೆ. ಮೊದಲಿಗೆ ‘ರಾಬರ್ಟ್’ ಬಿಡುಗಡೆಯಾಗಬೇಕಿದೆ. ಆ ನಂತರ, ಯತೀಶ್ ಬಾಬು, ಶೈಲಜಾ ನಾಗ್, ‘ಮಿಲನಾ’ ಪ್ರಕಾಶ್, ಸಂದೇಶ್ ನಾಗರಾಜ್ ಮುಂತಾದವರಿಗೆ ಚಿತ್ರ ಮಾಡಿಕೊಡುವುದಕ್ಕೆ ದರ್ಶನ್ ಒಪ್ಪಿಕೊಂಡಿದ್ದು, ಯಾರಿಗೆ ಮೊದಲು, ಯಾರಿಗೆ ನಂತರ ಎಂದು ಇನ್ನಷ್ಟೇ ತೀರ್ವನವಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net