ಡ್ರಗ್ ಮಾಫಿಯಾ ಬಳಿಕ ಇದೀಗ ಲ್ಯಾಂಡ್​ ಮಾಫಿಯಾ ವಿರುದ್ಧ ಸಲ್ಮಾನ್​ ಖಾನ್ ಧ್ವನಿ!

Salman khan
Published on

ಮುಂಬೈ: ಬಾಲಿವುಡ್​ನಲ್ಲಿ ಈಗಾಗಲೇ ಡ್ರಗ್​ ಮಾಫಿಯಾ ದೊಡ್ಡ ಹಾವಳಿಯನ್ನೇ ಸೃಷ್ಟಿಸಿದೆ. ಅಷ್ಟೇ ಅಲ್ಲ, ಘಟಾನುಘಟಿಗಳಿಗೂ ಡ್ರಗ್ ಮಾಫಿಯಾದ ನಂಟಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದೀಗ ಆ ಡ್ರಗ್​ ಮಾಫಿಯಾ ಮತ್ತು ಲ್ಯಾಂಡ್ ಮಾಫಿಯಾ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್​ ಧ್ವನಿ ಎತ್ತಿದ್ದಾರೆ.

ಹಾಗಂತ ನಿಜ ಜೀವನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಬದಲಿಗೆ ಇನ್ನೇನು ಬಿಡುಗಡೆಗೆ ರೆಡಿಯಾಗಿರುವ ರಾಧೆ ಸಿನಿಮಾದಲ್ಲಿ ಡ್ರಗ್​ ಮಾಫಿಯಾ ವಿರುದ್ಧ ಸಮರ ಸಾರುವ ಖಡಕ್​ ನಾಯಕನಾಗಿ ಸಲ್ಮಾನ್​ ಖಾನ್​ ಕಾಣಿಸಿಕೊಂಡಿದ್ದಾರೆ.

ಇದೀಗ ಆಯುಷ್ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಅಂತಿಮ್; ದಿ ಫೈನಲ್ ಟ್ರುತ್ ಸಿನಿಮಾದಲ್ಲಿಯೂ ಸಲ್ಮಾನ್​ ಖಾನ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ಸಿಂಗ್​ ವೇಷದಲ್ಲಿ ಈಗಾಗಲೇ ಸಲ್ಲು ಲುಕ್​ ಹೊರಬಂದಿದ್ದು, ಇಲ್ಲಿ, ಲ್ಯಾಂಡ್​ ಮಾಫಿಯಾದ ವಿರುದ್ಧ ಸಿಡಿದೇಳುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸಲ್ಮಾನ್​ ಕಾಣಿಸಿಕೊಳ್ಳಲಿದ್ದಾರೆ. ಸಿಕ್​ ಟರ್ಬನ್​ನಲ್ಲಿ ರಗಡ್​ ಲುಕ್​ನಲ್ಲಿ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

ಅಂದಹಾಗೆ 2018ರಲ್ಲಿ ಮರಾಠಿಯಲ್ಲಿ ತೆರೆಕಂಡಿದ್ದ ಮುಲ್ಶಿ ಪ್ಯಾಟರ್ನ್​ ಸಿನಿಮಾವನ್ನೇ ಹಿಂದಿಯಲ್ಲಿ ರಿಮೇಕ್​ ಮಾಡಲಾಗುತ್ತಿದ್ದು, ಮಹೇಶ್​ ಮಂಜ್ರೇಕರ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net